ಸಾರಾಂಶ
- ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉದ್ಘಾಟನೆ: ಉಮಾಪತಿ ಮಾಹಿತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕ, ಎಲ್ಲ ಘಟಕಗಳು ಹಾಗೂ ಹರಿಹರ ಪಂಚಮಸಾಲಿ ಪೀಠದಿಂದ ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ನ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜು.20ರಂದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಶ್ರೀ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಮಾರಂಭ ಸಾನ್ನಿಧ್ಯ ವಹಿಸಿ, ಉದ್ಘಾಟಿಸಲಿದ್ದಾರೆ. ಹರ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ.ಉಮಾಪತಿ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ದಾವಣಗೆರೆ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ ಉಪನ್ಯಾಸ ನೀಡುವರು ಎಂದರು.
ಸಮಾಜದ ರಾಜ್ಯ ಅಧ್ಯಕ್ಷ ಸೋಮನಗೌಡ ಎಂ.ಪಾಟೀಲ, ಶ್ರೀಪೀಠದ ಗೌರವ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ, ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣಶೆಟ್ಟಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತ ಬಿ.ಹುಲ್ಲತ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಚಿನ್ ಗುತ್ತೂರು, ಡಾ. ಕೆ.ಎಂ. ಸಂಜನಾ, ಡಾ. ವೈ.ಅರ್ಚನಾ ಜೀವನ್, ಡಾ.ನಂದೀಶ ಬಾದಾಮಿ, ಅಧಿತಿ ವೀರೇಶ ಅಂಗಡಿ, ವೈ.ಗಹನ್, ಶಾಂತಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.ಪಂಚಮಸಾಲಿ ಯುವ ಉದ್ಯಮಿ ಪುರಸ್ಕಾರವನ್ನು ಎಸ್.ಕೆ.ಗಿರೀಶ, ಅಕ್ಷಯ್ ಅಂದನೂರು, ಸಂಜಯ್ ಮಂಡಲೂರು, ಸ್ವರೂಪ್ ಮುದ್ದಳ್ಳಿ, ಎ.ಕೆ.ಚನ್ನಪ್ಪ, ಬಿ.ಜಿ.ಭರತ್‌ಗೆ, ಸಮಾಜದ ಗಣ್ಯರಾದ ಪೂಜಾರ ವೀರಪ್ಪ, ಸಿದ್ದವ್ವನಹಳ್ಳಿ ಸಿದ್ದವೀರಪ್ಪ, ಎಂ.ಸೋಮಶೇಖರ, ಮಂಜುನಾಥ ಕೆ.ನಲವಡೆ, ಮಂಜುನಾಥ ಕೊ ಹಾದಿಮನಿ, ಪಿ.ಪ್ರಕಾಶ, ಕೊಟ್ರೇಶ ಐನಳ್ಳಿ, ಶಿವಪ್ಪ ಗುರಪ್ಪ ನೆಲಬೆಂಚಿ, ಪರಪ್ಪ ಮಳಗಿ, ಉಮೇಶ ಅಧಿಕಾರಿ, ಸಿ.ಎಂ.ಟಿ.ಶಿವಕುಮಾರ, ಕೆ.ಸಾವಿತ್ರಮ್ಮ ನಾಗರಾಜ, ಸುಮಂಗಳಮ್ಮ ಬಕ್ಕಪ್ಪ ದಾವಳಗಿಯವರಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೇ, 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 260ಕ್ಕೂ ಹೆಚ್ಚು ಮಕ್ಕಳಿಗೆ ಸಮಾಜದಿಂದ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು. ಸಮಾಜ ಬಾಂಧವರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಿ.ಸಿ.ಉಮಾಪತಿ ಮನವಿ ಮಾಡಿದರು.ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಕಾಶೀನಾಥ, ಮುಖಂಡರಾದ ಎಂ.ದೊಡ್ಡಪ್ಪ, ಕಕ್ಕರಗೊಳ್ಳ ಮಂಜುನಾಥ ಪುರವಂತರ, ಲಿಂಗರಾಜ, ಅಂದನೂರು ಮುರುಗೇಶ ಇತರರು ಇದ್ದರು.
- - --17ಕೆಡಿವಿಜಿ2: ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.