ನಮ್ಮ ಸಮಾಜದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಚಿವೆಯನ್ನಾಗಿ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಮಾಜ ಸೂಚಿಸಿದೆ.
ಕುಕನೂರು: ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ತಮ್ಮ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ ನಾಲ್ಕು ಸಚಿವ ಸ್ಥಾನ ನೀಡಬೇಕೆಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ಜರುಗಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಹೊಸದಾಗಿ ಸರ್ಕಾರ ಯಾವುದೇ ಪಕ್ಷ ಬರಲಿ ನಮ್ಮ ಸಮಾಜಕ್ಕೆ೨-೩ ಸಚಿವ ಸ್ಥಾನ ನೀಡುತ್ತಿದ್ದರು. ಆದರೆ, ಒಟ್ಟು ಸಮಾಜದ ೧೧ ಶಾಸಕರಿದ್ದು ಒಬ್ಬರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ. ಮಹಿಳಾ ಮೀಸಲನ್ನು ಪರಿಗಣಿಸಿಲ್ಲ. ನಮ್ಮ ಸಮಾಜದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಚಿವೆಯನ್ನಾಗಿ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಮಾಜ ಸೂಚಿಸಿದೆ. ಸಚಿವ ಸಂಪುಟದ 2ನೇ ಪಟ್ಟಿಯಲ್ಲಿ ನಮ್ಮ ಸಮಾಜದ ಶಾಸಕರಿಗೆ ಸಚಿವಸ್ಥಾನ ನೀಡಬೇಕು. ಇಲ್ಲದಿದ್ದರೆ ಈಗಿನಿಂದಲೆ ನಾವು ರಾಜ್ಯಮಟ್ಟದ ದೊಡ್ಡ ಹೋರಾಟ ಮಾಡಲು ಸಿದ್ಧತೆ ಮಾಡುತ್ತೇವೆ. ಲಿಂಗಾಯತ ಕೋಟಾದಲ್ಲಿ ನಮ್ಮ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು. ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಗೂ ಸಚಿವಸ್ಥಾನ ನೀಡಬೇಕು ಎಂದು ಹೇಳಿದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ವಿನಾಯಕ ಬೆನ್ನಳ್ಳಿ, ಡಾ. ಬಸವರಾಜ ವೀರಾಪೂರ, ಈಶಪ್ಪ ಆರೇರ್, ಶರಣಗೌಡ ಪಾಟೀಲ್, ಗವಿಸಿದ್ದಪ್ಪ ಆರೇರ್, ಮಲ್ಲಿಕಾರ್ಜುನ ಕುಡ್ಲೂರು, ಉಮಾ ಆರೇರ್, ಸರಸ್ವತಿ ಕುಡ್ಲೂರು, ಮಹೇಶ ಮೈನಳ್ಳಿ, ಚಂದ್ರು ಬಗನಾಳ, ದೀಪಾ ಮಹೇಶಗೌಡ, ಮಂಜುನಾಥ ಸೋಂಪೂರ, ಬಸಪ್ಪ ಈಬೇರಿ ಇದ್ದರು.