ಸುಮಾರು ೧೦ ಕಿಮೀ ದೂರದ ರಾಮದುರ್ಗದ ಕೆರೆಗೆ ಹೋಗಿ ಬರಲು ದಿನನಿತ್ಯ ₹೬೦ ಖರ್ಚಾಗಿದೆ

ಕನಕಗಿರಿ: ಸಮರ್ಪಕ ನರೇಗಾ ಕೂಲಿ ಹಣ ನೀಡದ್ದಕ್ಕೆ ಆಕ್ರೋಶಗೊಂಡ ತಾಲೂಕಿನ ಹಿರೇಮಾದಿನಾಳದ ಕೂಲಿ ಕಾರ್ಮಿಕರು ಗುರುವಾರ ಚಿಕ್ಕಮಾದಿನಾಳ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹಿರೇಮಾದಿನಾಳ ಗ್ರಾಮದ ಸುಮಾರು ೪೦೦ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ನರೇಗಾ ಕಾಮಗಾರಿಯಡಿ ರಾಮದುರ್ಗದ ಕೆರೆಯಲ್ಲಿ ೧೪ ದಿನಗಳ ಕಾಲ ಹೂಳು ತೆಗೆಯುವ ಕೆಲಸ ಮಾಡಿದ್ದೇವೆ. ಆದರೆ, ಕಾರ್ಮಿಕರ ಖಾತೆಗೆ ದಿನಕ್ಕೆ₹೩೧೦ನಂತೆ ಕೂಲಿ ಹಣ ಜಮೆಯಾಗಿದೆ. ಸುಮಾರು ೧೦ ಕಿಮೀ ದೂರದ ರಾಮದುರ್ಗದ ಕೆರೆಗೆ ಹೋಗಿ ಬರಲು ದಿನನಿತ್ಯ ₹೬೦ ಖರ್ಚಾಗಿದೆ. ಸರ್ಕಾರದ ಯೋಜನೆಯಲ್ಲಿ ಕೂಲಿ ಹಣ ದಿನಕ್ಕೆ ₹೩೭೫ ಇದ್ದು, ನಮಗೆ ಕೇವಲ ₹೩೧೦ನಂತೆ ಜಮೆಯಾಗಿದೆ. ಈ ಬಗ್ಗೆ ಕೇಳಿದರೆ ನೀವು ಕೆಲಸ ಮಾಡಿದಷ್ಟು ಕೂಲಿ ದೊರೆತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕ ಹುಲುಗಪ್ಪ ತಳವಾರ ಆರೋಪಿಸಿದರು.

ಹನುಮಂತಪ್ಪ ಗೌಡ್ರ, ಮಾದಿನಾಳಪ್ಪ ಜಿನ್ನಾಪುರ, ಹೊಳಿಯಪ್ಪ ಹೊಸೂರು, ಸಣ್ಣೆಪ್ಪ ಗೌಡ್ರ, ಮಲಿಯಪ್ಪ ಬಳ್ಳೊಳ್ಳಿ, ಲೋಕಪ್ಪ ಗೌಡ್ರ, ರಾಮನಗೌಡ, ಉಮೇಶ ಬಡಿಗೇರ, ರಾಜಸಾಬ ಕೊತ್ವಾಲ, ಶಿವಮೂರ್ತಿ ಹರಿಜನ, ಹನುಮಮ್ಮ ಗೌಡ್ರ, ಹನುಮಮ್ಮ ಭಾವಿಕಟ್ಟಿ, ಜಡಿಯಪ್ಪ ಉಪ್ಪಾರ, ಹುಲಿಗೆಮ್ಮ ಜಿನ್ನಾಪುರ, ಹನುಮಮ್ಮ ಹರಿಜನ, ಆಶಾಬೀ, ಶೇಖಮ್ಮ ಉಪ್ಪಾರ, ಅಂಬಮ್ಮ ಮಡಿವಾಳ ಇತರರಿದ್ದರು.