ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶ್ರೀಮಡಿವಾಳ ಮಾಚಿದೇವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಾಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಡಿವಾಳ ಸಮುದಾಯದ ತಾಲೂಕು ಅಧ್ಯಕ್ಷ ಹರಳಹಳ್ಳಿ ರಾಮಚಂದ್ರು ಮಾತನಾಡಿ, ಕ್ರಿ.ಶ 12ನೇ ಶತಮಾನದ ಬಸವಣ್ಣ ನವರ ಕಾಲದಲ್ಲಿ ರಚಿಸಲ್ಪಟ್ಟ ವಚನಗಳ ರಕ್ಷಣೆ ಮಾಡುವಲ್ಲಿ ಮಡಿವಾಳ ಮಾಚೀದೇವರು ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದರು.

ಬಸವಣ್ಣ ಅವರ ನಂಬಿಕಸ್ಥರ ಬಂಟನಾಗಿದ್ದ ಮಡಿವಾಳ ಮಾಚೀದೇವರು ಮೇಲ್ವರ್ಗವದರು ದಂಗೆ ಎದ್ದು ವಚನಗಳನ್ನು ನಾಶ ಮಾಡಲು ಮುಂದಾದಾಗ ಅವರ ವಿರುದ್ದ ಹೋರಾಟ ಮಾಡಿ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿದರು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು ಇಂದಿನ ಪೀಳಿಗೆಯ ಮಕ್ಕಳು ಸೇರಿದಂತೆ ಎಲ್ಲರಿಗೂ ಆದರ್ಶವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವು, ಅಗಟಹಳ್ಳಿ ರಘು, ಲೋಕೇಶ್, ಮಾಲಿಂಗಶೆಟ್ಟಿ, ನಾಗರಾಜು, ಮೈಸೂರಿನ ಬೃಂದಾವನ ಬಡಾವಣೆ ಮಡಿವಾಳರ ಸಂಘದ ಅಧ್ಯಕ್ಷ ಮಹೇಶ್, ಸಂತೋಷ್ ಕಿರಾಳು. ಸಿದ್ದಲಿಂಗಪುರ ಸೀನಣ್ಣ. ಹೆಬ್ಬಾಳ್ ವೆಂಕಟೇಶ್, ಗ್ರಾಮದ ಪ್ರಮುಖರಾದ ಲೋಕೇಶ್, ಸಿದ್ದರಾಜು, ನಿಂಗಶೆಟ್ಟಿ, ಇಂಧೂದರ, ರವಿ, ಆನಂದ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.ಸೊಳ್ಳೇಪುರ ಡೇರಿಗೆ ನಿರ್ದೇಶಕರು ಆಯ್ಕೆ


ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ನಿರ್ದೇಶಕರು ಚುನಾಯಿತರಾದರು. ಸಾಮಾನ್ಯ ವರ್ಗದಿಂದ ಪಾಪೇಗೌಡ, ಬಲರಾಮೇಗೌಡ, ಎಸ್.ಶಂಕರೇಗೌಡ, ಚಂದ್ರಶೇಖರ ಆಯ್ಕೆಯಾದರು. ಮಹಿಳಾ ಮೀಸಲು ವರ್ಗದಿಂದ ಮಂಜುಳಾ, ಇಂದ್ರಮ್ಮ, ಹಿಂದುಳಿದ ಪ್ರವರ್ಗ(ಬಿ) ವಿಭಾಗದಿಂದ ಎಸ್.ಕೆ. ನಾಗಣ್ಣ ಚುನಾಯಿತರಾದರು. ಕಾಂಗ್ರೆಸ್ ಬೆಂಬಲಿತರು ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿದ್ದು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಚುನಾವಣಾಧಿಕಾರಿಯಾಗಿ ಭರತ್‌ಕುಮಾರ್‌ ಕರ್ತವ್ಯ ನಿರ್ವಹಿಸಿದರು.