ರೈತರ ಬೆಳೆಗೆ ಸೊಸೈಟಿ ಹಂತದಲ್ಲಿ ಖರೀದಿಸಲು ಕ್ರಮವಹಿಸಲಾಗಿದೆ. ಗ್ರಾಮಕ್ಕೆ 1,50 ಕೋಟಿ ರು. ವೆಚ್ಚದ ಕಾಮಗಾರಿ ಜೊತೆಗೆ ಪಂಚಾಯ್ತಿಗೆ 8.50 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಇದರ ಜೊತೆಗೆ ಪಟ್ಟಣಗೇರಿ-ಶಂಕಹಳ್ಳಿ ರಸ್ತೆಗೂ ಶೀಘ್ರ ಭೂಮಿ ಪೂಜೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಂದ್ರೆ ಗ್ರಾಮದಲ್ಲಿ 1.50 ಕೋಟಿ ರು. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ಸಲ್ಲಿಸಿದರು.

ಬಳಿಕ ಶಾಸಕರು ಮಾತನಾಡಿ, ಪಾಂಡವಪುರ ತಾಲೂಕನ್ನು ರಾಜ್ಯ ಸರ್ಕಾರ ಸಾವಯವ ಕೃಷಿ ತಾಲೂಕು ಎಂಬುದಾಗಿ ಘೋಷಿಸಿದೆ. ಶೀಘ್ರವೇ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಲಿದ್ದಾರೆ. ಹಾಗಾಗಿ ರೈತರು ರಾಸಾಯನಿಕ ಬಳಸದೆ ತಿಪ್ಪೆ ಗೊಬ್ಬರ ಬಳಕೆ ಮಾಡಿ ಸಾವಯವ ಕೃಷಿ ಮಾಡಿ ಹಂತ ಹಂತವಾಗಿ ರಾಸಾಯನಿಕ ಕೃಷಿಯಿಂದ ವಿಮುಕ್ತರಾಗಬೇಕು ಎಂದರು.

ರೈತರ ಬೆಳೆಗೆ ಸೊಸೈಟಿ ಹಂತದಲ್ಲಿ ಖರೀದಿಸಲು ಕ್ರಮವಹಿಸಲಾಗಿದೆ. ಗ್ರಾಮಕ್ಕೆ 1,50 ಕೋಟಿ ರು. ವೆಚ್ಚದ ಕಾಮಗಾರಿ ಜೊತೆಗೆ ಪಂಚಾಯ್ತಿಗೆ 8.50 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಇದರ ಜೊತೆಗೆ ಪಟ್ಟಣಗೇರಿ-ಶಂಕಹಳ್ಳಿ ರಸ್ತೆಗೂ ಶೀಘ್ರ ಭೂಮಿ ಪೂಜೆ ಮಾಡಲಾಗುವುದು ಎಂದರು.

ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿ, ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವ ನಮಗೆ ಮೂಲ ಸೌಕರ್ಯಗಳು ಒದಗಿಸಬೇಕು. ಕಾಮಗಾರಿ ನಡೆಸುವ ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ರೈತಸಂಘದ ಅಧ್ಯಕ್ಷ ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಸ್.ದಯಾನಂದ, ಮಹಿಳಾಧ್ಯಕ್ಷೆ ರೂಪ ನಿತಿನ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಂದ ಮರಿದೇವೇಗೌಡ, ಸ್ವಾಮೀಗೌಡ ನ್ಯಾಯಬೆಲೆ ಅಂಗಡಿ, ಆರ್.ಮರಿದೇವೇಗೌಡ, ಕಾಂತರಾಜು, ಡಿ.ವೆಂಕಟೇಶ್, ಅರುಣ್ ಕುಮಾರ್, ರಮೇಶ, ಸೋಮೇಗೌಡ, ಚರಣ್, ರಾಮಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.ನಾಳೆ ಸರ್ಕಾರಿ ನೌಕರರ ದಿನಾಚರಣೆಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಆಶ್ರಯದಲ್ಲಿ ಮೇ 13 ರಂದು ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಹಾಗೂ ನಾಗರೀಕ ಸೇವಾ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ ನಡೆಯುವ ಸಮಾರಂಭದಲ್ಲಿ ಕೇಂದ್ರ, ರಾಜ್ಯ ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಎಡೀಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಎಸ್. ಶಂಭುಗೌಡ ಸೇರಿದಂತೆ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.