ಕರ್ನಾಟಕ ರಕ್ಷಣ ವೇದಿಕೆಯಿಂದ ನ.30ರಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಪಾಂಡವಪುರ:

ಕರ್ನಾಟಕ ರಕ್ಷಣ ವೇದಿಕೆಯಿಂದ ನ.30ರಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆಯುವ ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವಂತೆ ತಾಲೂಕು ಕರವೇ ಅಧ್ಯಕ್ಷ ಸುಂಕಾತೊಣ್ಣೂರು ಜೆ.ದೇವೇಗೌಡ ಮನವಿ ಮಾಡಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಕ್ಷೇತ್ರದ ಶ್ರೀಗಳು, ಕರವೇ ರಾಜ್ಯಾಧ್ಯಕ್ಷರು, ಸಚಿವರು, ರಾಜ್ಯಸಭಾ ಸದಸ್ಯರು, ಮಾಜಿ ಸಚಿವರು, ಜಿಲ್ಲೆಯ ಶಾಸಕರು, ಅಧಿಕಾರಿಗಳು. ಕರವೇ ಪದಾಧಿಕಾರಿಗಳು ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪಾಂಡವಪುರ ತಾಲೂಕಿನಿಂದ ಸಮಾಜಸೇವಕ ಸುಂಕಾತೊಣ್ಣೂರು ಎಸ್.ಡಿ.ಶಿವಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಳಿಕ ಕನ್ನಡ ನಾಡಿನ ಹೆಸರಾಂತ ಗಾಯಕರಿಂದ ಸಾಂಸ್ಕತಿಕ ಕಾರ್ಯಕ್ರಮವನ್ನು ನಡೆಯಲಿದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಸಾಹಿತಿಗಳು, ಕನ್ನಡ ಆಸಕ್ತರು, ಕವಿ, ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕವರೇ ಮುಖಂಡರಾದ ಸಿ.ಡಿ.ಮಹದೇವು, ಸತೀಶ್, ಯೋಗಣ್ಣ, ಭಾಸ್ಕರ, ಭಾರತಿ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

ಅರಕೆರೆಯಲ್ಲಿ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ: ಎ.ಆರ್.ಅನಿಲ್ ಬಾಬುಮಂಡ್ಯ:ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಹಾಗೂ ಸರ್ವೋದಯ ಅಲಯನ್ಸ್ ಸಂಸ್ಥೆ (ಅರಕೆರೆ) ಸಹಯೋಗದಲ್ಲಿ ಶ್ರೀರಂಗಪಟ್ಟಣದ ಅರಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನ.30 ರಂದು 71ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎ.ಆರ್.ಅನಿಲ್ ಬಾಬು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಕೆರೆಯ ಹೊಸ ಬಡಾವಣೆಯ ಮುನೇಶ್ವರ ದೇವಸ್ಥಾನದಿಂದ ಬೆಳ್ಳಿಯ ರಥದಲ್ಲಿ ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆ ಆರಂಭವಾಗಲಿದೆ. 501 ಮಹಿಳೆಯರು ಕಳಸ ಹೊತ್ತು ಸಾಗುವರು. ಪ್ರಗತಿಪರ ರೈತ ಸಿದ್ದಪ್ಪ ಅವರು ಸಿದ್ಧಪಡಿಸಿರುವ ರೈತ ಸ್ತಬ್ಧಚಿತ್ರ, ಡೊಳ್ಳು ಕುಣಿತ, ಜನಪದ ಕುಣಿತ, ಪಟದ ಕುಣಿತ, ಒನಕೆ ಕುಣಿತ, ಬೊಂಬೆಗಳು, ಸೋಮನ ಕುಣಿತ, ನಂದಿಧ್ವಜ ಸೇರಿದಂತೆ ಒಟ್ಟು 10 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದರು.ಸಂಜೆ 5 ಗಂಟೆಗೆ ಕಾಲೇಜು ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಉದ್ಘಾಟಿಸುವರು. ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಪ್ರಧಾನ ಭಾಷಣ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮಂಡ್ಯ ಅಲಯನ್ಸ್ ಸಂಸ್ಥೆಯ ಸಂಸ್ಥಾಪಕ ಕೆ.ಟಿ.ಹನುಮಂತು, ಮಮತೆಯ ಮಡಿಲು ಸಂಸ್ಥೆ ಮಂಗಲ ಎಂ.ಯೋಗೀಶ್ ಗಾಂವಾದಿ ಡಾ.ಸುಜಯ್‌ಕುಮಾರ್ ಭಾಗವಹಿಸುವರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೋಮಶೇಖರ್, ಎಂ.ಕೆ.ಮಂಜುನಾಥ್, ಸಂಧ್ಯಾ, ಎ.ಎಲ್.ಚನ್ನಪ್ಪಗೌಡ, ಎಚ್.ಕೆ.ಮರೀಗೌಡ, ಕೆ.ರಾಮೇಗೌಡ, ಬಿ.ಸಿ.ಸಿದ್ದೇಗೌಡ, ಡಾ.ಎಸ್.ಎಂ.ರಾಜೇಶ್, ತಡಗವಾಡಿ ಹೇಮನಾ ಅವರನ್ನು ಸನ್ಮಾನಿಸಲಾಗುವುದು. ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಎ.ಎಸ್.ಕಿಶೋರ್, ಎ.ಎಸ್.ಅಭಿಷೇಕ್, ಮಧುಸೂದನ್‌ಗೌಡ, ಎಂ.ಸಿದ್ದೇಶ್, ಉಮಾಶಂಕರ್, ಅಭಿಷೇಕ್ ಹಾಜರಿದ್ದರು.