ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪುರಸಭೆಯಲ್ಲಿ ಮುಖ್ಯಾಧಿಕಾರಿ ವೀಣಾ 2024-25ನೇ ಸಾಲಿನಲ್ಲಿ 18.67 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ ಮಾಡಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿಗಳಾದ ಉಪವಿಭಾಗಾಧಿಕಾರಿ ಮಾರುತಿ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯರ ಸಮ್ಮಖದಲ್ಲಿ ಪುರಸಭೆ ಆರಂಭಿಕ ಶುಲ್ಕ 71.62 ಲಕ್ಷ ಒಳಗೊಡಂತೆ ಒಟ್ಟು ನಿರೀಕ್ಷಿತ ಆದಾಯ 11.99 ಕೋಟಿ ರು. ಹಾಗೂ ನಿರೀಕ್ಷಿತ ಖರ್ಚು 11.81 ಕೋಟಿ ರು. ಸೇರಿ ಒಟ್ಟು 18.67 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.
ವಾಣಿಜ್ಯ ಮಳಿಗೆ ಬಾಡಿಗೆ 2.30 ಕೋಟಿ ರು., ಅಭಿವೃದ್ದಿ ಶುಲ್ಕ 40 ಲಕ್ಷ ರು., ವ್ಯಾಪಾರ ಪರವಾನಗಿ 12.50 ಲಕ್ಷ ರು., ಕಟ್ಟಡ ಕಾಯ್ದೆಗಳಿಗೆ ಸಂಬಂಧಟ್ಟ ಶುಲ್ಕ 2 ಲಕ್ಷ ರು., ಟೆಂಡರ್ ಫಾರ್ಮ್ ಮಾರಾಟ ಮತ್ತು ಅನುಪಯುಕ್ತ ವಸ್ತುಗಳು ಮಾರಾಟದಿಂದ 55 ಲಕ್ಷ ರು., ವಿದ್ಯುತ್ ಚ್ಛಕ್ತಿ ಅನುದಾನ 2.50 ಕೋಟಿ ರು., ವಾರದ ಸಂತೆ, ಫುಟ್‌ಬಾತ್ ಮತ್ತು ಇತರೆ ನೆಲ ಬಾಡಿಗಳಿಂದ 14 ಲಕ್ಷ ರು.ನೀರಿನ ತೆರಿಗೆ, ಒಳಚರಂಡಿ ಮತ್ತು ನೀರು ಸರಬರಾಜು ಸಂಪರ್ಕ ಹಾಗೂ ಬೋರ್ ಶುಲ್ಕದಿಂದ 43.25 ಲಕ್ಷ., ಎಸ್‌ಎಫ್‌ಸಿ ಅನಿಬಂಧಿತ ಅನುದಾನ 1 ಕೋಟಿ, ಎಸ್‌ಎಫ್‌ಸಿ ಇತರೆ ಅನುದಾನ 20 ಲಕ್ಷ., ಸ್ಟ್ಯಾಂಪ್‌ಶುಲ್ಕ1 ಕೋಟಿ, ಜನನ, ಮರಣ ಇತರೆ ಪ್ರಮಾಣ ಪತ್ರದ ಶುಲ್ಕ 15.65 ಲಕ್ಷ., ಆಸ್ತಿ ತೆರಿಗೆ 1.5 ಕೋಟಿ ದಂಡ, ಖಾತಾ ನಕಲು, ವರ್ಗಾವಣೆ ಉಪಕರಣಗಳ ಸಂಗ್ರಹಣೆ, ಘನತ್ಯಾಜ್ಯ ನಿರ್ವಹಣಾ ಶುಲ್ಕ 23 ಲಕ್ಷ, ಶಾಸಕ ಮತ್ತು ಸಂಸದರ ಅನುದಾನ 10 ಲಕ್ಷ., ಪಿಕೆಜಿಬಿ 7.5 ಲಕ್ಷ ಹಾಗೂ ಠೇವಣಿ ಭದ್ರತಾ ಠೇವಣಿ ಮತ್ತು ಬಾಡಿಗೆ ಠೇವಣಿಗಳಿಂದ 9.5 ಲಕ್ಷ ಸೇರಿದಂತೆ ಬಟ್ಟಾರೆ 11.99 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಕಚೇರಿ ನೌಕರರ ವೇತನ ಅನುದಾನ 2.30 ಕೋಟಿ, ಕಚೇರಿ ವೆಚ್ಚಗಳು, ಆಡಳಿತ, ಸ್ಟೇಷನರಿ, ವಿಮೆಗಳು, ಪ್ರಮಾಣ ಬತ್ಯೆ 8.5 ಲಕ್ಷ, ಕಾನೂನು ವೆಚ್ಚಗಳು, ಲೆಕ್ಕ ಪರಿಶೋಧನಾ ಶುಲ್ಕ, 3ನೇ ಪಾರ್ಟಿ ತಪಾಸಣಾ ಶುಲ್ಕ, ಜಾಹಿರಾತು ಶುಲ್ಕ, ದೂರವಾಣಿ, ವಿದ್ಯುತ್ ವೆಚ್ಚಗಳು, ಅಂಚೆ ಶುಲ್ಕ, ಕಚೇರಿಯ ಇತರೆ ಸಾಮಾನ್ಯ ವೆಚ್ಚಗಳು ಹಾಗೂ ಸದಸ್ಯತ್ವ ಮತ್ತು ವಂತಿಗಳು 36.50 ಲಕ್ಷ., ಪೀಟೋಪಕರಣಗಳು, ದುರಸ್ಥಿಗಳು, ಬ್ಯಾಂಕ್ ಶುಲ್ಕಗಳು, ಚುನಾವಣಾ ವೆಚ್ಚಗಳು, ನಾಡಹಬ್ಬ ವೆಚ್ಚಗಳು ಕಾರ್‍ಯಕ್ರಮ ವೆಚ್ಚಗಳು 12 ಲಕ್ಷ., ವಂತಿಕೆಗಳು-ಕ್ರೀಡಾ ಚಟುಚಟಿಕೆಗಳು ಕಾರ್‍ಯಕ್ರಮ ವೆಚ್ಚಗಳು, ವೈದ್ಯಕೀಯ ವೆಚ್ಚಗಳು, ಮಳೆಹಾನಿ, ಅಪಘಾತ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಹಾಯಧನ ನೀಡಲು 3 ಲಕ್ಷ., ಬೀದಿದೀಪ ಮತ್ತು ನೀರು ಸ್ಥಾವರಗಳ ವಿದ್ಯುತ್ ಬಿಲ್ 2.50 ಕೋಟಿ., ಕೌನ್ಸಿಲ್ ಸಂಬಂಧಿ ವೆಚ್ಚುಗಳು-ಗೌರವಧನ 12.50 ಲಕ್ಷ, ಕ್ಷೇಮಾಭಿವೃದ್ದಿ ದಿನಗೂಲಿ ನೌಕರರ ವೇತನ 30 ಲಕ್ಷ., ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣೆ ಹೊರಗುತ್ತಿಗೆ ಕಾರ್‍ಯಾಚರಣೆ ವೆಚ್ಚಗಳು 65.75 ಲಕ್ಷ ಸೇರಿದಂತೆ ಇತರೆ ವೆಚ್ಚಗಳಿಗಾಗಿ 11.81 ಕೋಟಿ ರು. ಅಂದಾಜಿಸಲಾಗಿದೆ.ನೀರಿನ ಸಮಸ್ಯೆ ನಿವಾರಣೆ ಮಾಡಿ:
ಪಟ್ಟಣದಲ್ಲಿ ದಿನೇದಿನೆ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ಕ್ರಮವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.2002ರ ಜನಗಣತಿ ಪ್ರಕಾರಣದಲ್ಲಿ ಪಟ್ಟಣದಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಇದೀಗ ಅದು 30 ಸಾವಿರ ದಾಟಿದೆ. ಆದರೆ, ಹಿಂದಿನ ಸಂಖ್ಯೆಯ ಆಧಾರದಲ್ಲಿ 22 ಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದ್ದು 8 ಲಕ್ಷ ಲೀ ನೀರಿನ ಕೊರತೆ ಇದೆ. ಹಾಗಾಗಿ ಶ್ರೀರಂಗಪಟ್ಟಣದ ಜಾಕ್‌ವಾಲ್ ಬಳಿ ಹೆಚ್ಚಿನ ಸಮರ್ಥ್ಯದ ಮೋಟಾರ್ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಜತೆಗೆ ಪುರಸಭೆ ವತಿಯಿಂದ ನೀಡಲಾಗಿರುವ ಮಹಿಳೆಗಳ ಬಾಡಿಕೆ ತುಂಬಾ ಕಡಿಮೆ ಇದೆ. ಹಾಗಾಗಿ ಮಹಿಳೆಗಳಿಗೆ ಹೊಸದಾಗಿ ಟೆಂಡರ್ ಕರೆಹಿಸಿ ಹೊಸಬಾಡಿಗೆ ನಿಗದಿ ಪಡಿಸಲು ಕ್ರಮವಹಿಸುವ ಮೂಲಕ ಪುರಸಭೆಯ ಆದಾಯ ಹೆಚ್ಚಳ ಮಾಡಬೇಕು. ಜತೆಗೆ ಬಡಾವಣೆ ಶುಲ್ಕವನ್ನು 10 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡಲು ಹಿಂದ ಸಭೆಯಲ್ಲಿ ತೀರ್ಮಾನಿಸಿದ್ದರೂ ಮುಖ್ಯಾಧಿಕಾರಿಗಳು ಹಳೇ ಶುಲ್ಕವನ್ನೇ ವಸೂಲಿ ಮಾಡುತ್ತಿದ್ದಾರೆ. ಬಡಾವಣೆ ಶುಲ್ಕ ಹೆಚ್ಚಳ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.ಸಭೆಯಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.