ರಾಮನಗರ: ರಾಮನಗರ-ಚನ್ನಪಟ್ಟಣದ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ವೇಳೆ ಭಾವಸಾರ ಕ್ಷತ್ರಿಯ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ಸಮುದಾಯ ಭವನ ನಿರ್ಮಾಣ ಸಂಬಂಧ ಸಿಎ ಸೈಟ್ ಅನ್ನು ವಿತರಿಸಿದ್ದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ಮರಿಸಿದರು

ರಾಮನಗರ: ರಾಮನಗರ-ಚನ್ನಪಟ್ಟಣದ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ವೇಳೆ ಭಾವಸಾರ ಕ್ಷತ್ರಿಯ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ಸಮುದಾಯ ಭವನ ನಿರ್ಮಾಣ ಸಂಬಂಧ ಸಿಎ ಸೈಟ್ ಅನ್ನು ವಿತರಿಸಿದ್ದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ಮರಿಸಿದರು.

ಕ್ಷತ್ರಿಯ ಸಮುದಾಯ 3ನೇ ವರ್ಷದ ಶ್ರೀಪಾಂಡುರಂಗಸ್ವಾಮಿ ಹಾಗೂ ರುಕ್ಮಾಯಿ ದಿಂಡಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಅಧ್ಯಕ್ಷ ಕಿರಣ್ ರಾವ್ ಬಾಂಬೋರೆ ಮನವಿಯಂತೆ ಶೀಘ್ರದಲ್ಲಿಯೇ ಸಿಎ ನಿವೇಶನದಲ್ಲಿ ಬೋರ್‌ವೆಲ್ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಸಣ್ಣ ಸಮುದಾಯಗಳು ಮುನ್ನೆಲೆಗೆ ಬರಬೇಕಿದೆ. ಹಾಗಾಗಿ ಸರ್ಕಾರ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಭಾವಸಾರ ಕ್ಷತ್ರಿಯ ಸಮುದಾಯದ ಭವನ ನಿರ್ಮಾಣದ ವೇಳೆ 1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಸಮಾಜದ ಅಧ್ಯಕ್ಷ ಕಿರಣ್‌ರಾವ್ ಬಾಂಬೋರೆ ಮಾತನಾಡಿ, ನಮ್ಮ ಸಮುದಾಯದ ಕುಲಕಸುಬು ಬಟ್ಟೆ ಹೊಲೆಯುವುದು. ಇತ್ತೀಚಿನ ದಿನದಲ್ಲಿ ಕುಲಬಸುಬಿನಿಂದ ಹೊರ ಬರುತ್ತಿರುವ ಯುವ ಪೀಳಿಗೆ ಇಂಜಿನಿಯರ್, ವೈದ್ಯಕೀಯ ಇತರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯ ಹಿರಿಯ ಮುಖಂಡರು ಹಾಗೂ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಪಾಂಡುರಂಗ ಹಾಗೂ ರುಕ್ಮಾಯಿ ದಿಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಂಸದ ಮಂಜುನಾಥ್ ಅವರನ್ನು ಸಮುದಾಯ ಮುಖಂಡರು ಸನ್ಮಾನಿಸಿದರು.

ಈ ವೇಳೆ ಬಿಳುಗುಂಬ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸೋಮಶೇಖರ್ ಕಾಂಬ್ಳೆ, ಮರಾಠ ಸಮುದಾಯದ ಬಾಬುರಾವ್, ಯಶ್ವಂತ್ ರಾವ್, ಚಂದನ್ ಮೋರೆ, ಇತರರಿದ್ದರು.

18ಕೆಆರ್ ಎಂಎನ್ 10.ಜೆಪಿಜಿ

ಶ್ರೀಪಾಂಡುರಂಗ ಹಾಗೂ ರುಕ್ಮಾಯಿ ದಿಂಡಿ ಮರೆವಣಿಗೆಯಲ್ಲಿ ಸಂಸದ ಮಂಜುನಾಥ್ ಪಾಳ್ಗೊಂಡಿದ್ದರು.