ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದು ಒಂದು ವರ್ಷ ಕಳೆದರೂ ಕೆಲಸ ಸ್ಥಗಿತಗೊಂಡಿರುವುದನ್ನು ಖಂಡಿಸಿ ಪಂಜನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ: ತಾಲೂಕಿನ ಪಂಜನಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದು ಒಂದು ವರ್ಷ ಕಳೆದರೂ ಕೆಲಸ ಸ್ಥಗಿತಗೊಂಡಿರುವುದನ್ನು ಖಂಡಿಸಿ ಪಂಜನಹಳ್ಳಿ ಗ್ರಾಮಸ್ಥರು ಪಟ್ಟಣದ ಪಿಡಬ್ಲ್ಯೂಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಊಟಿ ರಸ್ತೆಯಿಂದ ಪಂಜನಹಳ್ಳಿ ವೀರನಪುರ ರಸ್ತೆ ಕಾಮಗಾರಿ ಕಳೆದ ಸರ್ಕಾರದ ಅವಧಿಯ ಕೊನೆಯಲ್ಲಿ ೩.೩ ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದು, ಪಂಜನಹಳ್ಳಿ ಗ್ರಾಮದೊಳಗೆ ಹಳ್ಳ ಕೊಳ್ಳ ಬಿದ್ದಿದೆ. ಅಲ್ಲದೆ ಮಳೆ ಬಂದಾಗ ನೀರು ರಸ್ತೆಯಲ್ಲಿ ನಿಂತು ಕೆಸರು ಮಯವಾಗಿ ಸಂಚಾರಕ್ಕೆಅಡಚಣೆ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಸ್ಥಗಿತಗೊಂಡ ಕಾಮಗಾರಿ ಆರಂಭಿಸಬೇಕು ಎಂದು ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ರವಿಕುಮಾರ್ ಮಾತನಾಡಿ, ಗುತ್ತಿಗೆದಾರನಿಗೆ ಎಂಟು ನೊಟೀಸ್ ನೀಡಲಾಗಿದೆ ಎಂದರು.ಗುತ್ತಿಗೆದಾರರ ಜೊತೆ ಎಇಇ ರವಿಕುಮಾರ್ ಮೊಬೈಲ್ ಮೂಲಕ ಸಂಪರ್ಕಿಸಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲಸ ಶುರು ಮಾಡಿಸಿ ಎಂದು ಹೇಳಿದರು. ಆಗ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಗುತ್ತಿಗೆದಾರ 15 ದಿನಗಳಲ್ಲಿ ಕೆಲಸ ಮಾಡವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪಂಜನಹಳ್ಳಿ ನಾಗೇಂದ್ರ, ಗ್ರಾಮದ ಸುನೀಲ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಹಲವರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))