ಪಹಾಲ್ಗಮ್ ಉಗ್ರರ ಕೃತ್ಯ ಖಂಡಿಸಿ ಪಂಜಿನ ಮೆರವಣಿಗೆ

| Published : May 09 2025, 12:38 AM IST

ಸಾರಾಂಶ

ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕಾಶ್ಮೀರದಲ್ಲಿ ಪಹಾಲ್ಗಮ್ನಲ್ಲಿ 26 ಅಮಾಯಕ ಪ್ರವಾಸಿಗರ ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಯಿತು.

ಮಡಿಕೇರಿ : ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಕಾಶ್ಮೀರದಲ್ಲಿ ಪಹಾಲ್ಗಮ್ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಬಿ. ದಿನೇಶ್ ಅವರು ಈ ಸಂದರ್ಭ ಮಾತನಾಡಿ ಇಂತಹ ಹೇಯ ಕೃತ್ಯಕ್ಕೆ ಪಾಕಿಸ್ಥಾನದ ಪಿತೂರಿಯೇ ಕಾರಣ, ಹಲವಾರು ಸಂದರ್ಭದಲ್ಲಿ ಕಾಲುಕೆರೆದು ಯುದ್ಧಕ್ಕೆ ಬಂದ ಪಾಕ್ ಸರಿಯಾಗಿ ಪೆಟ್ಟುತಿಂದಿದೆ, ಆದರೂ ಆ ದೇಶಕ್ಕೆ ಬುದ್ಧಿ ಬಂದಿಲ್ಲ, ಭಾರತ ಕೂಡಲೇ ಯುದ್ಧ ನಡೆಸಿ ಆ ದೇಶಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಉಗ್ರರ ಅಡಗು ದಾಣಾ ವನ್ನು ನಾಶಗೊಳಿಸಬೇಕು ಎಂದು ಆಗ್ರಹಿಸಿದರು. ಈ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಸಂಖ್ಯೆಯಲ್ಲಿ ಜಾತಿ ಭೇದವಿಲ್ಲದೆ ಪಾಲ್ಗೊಂಡರು.