ಕಟೀಲು ಕ್ಷೇತ್ರದ ವಿಹಂಗಮ ನೋಟ

| Published : Jul 21 2024, 01:22 AM IST

ಸಾರಾಂಶ

ಈ ವರ್ಷ ಸುರಿಯುತ್ತಿರುವ ಭಾರಿ ಮಳೆಗೆ ನಂದಿನಿ ನದಿ ಜೀವಕಳೆ ಪಡೆದುಕೊಂಡು ಸಮುದ್ರ ರಾಜನತ್ತ ವೇಗವಾಗಿ ಭೋರ್ಗೆರೆಯುತ್ತ, ಧುಮ್ಮಿಕ್ಕುವ ಸೊಬಗು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಮೂಲ್ಕಿ: ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಂದಿನಿ ನದಿಯು ಭೋರ್ಗರೆಯುತ್ತ ಹರಿಯುತ್ತಿದ್ದು, ನದಿಯಿಂದ ಆವೃತವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ವಿಹಂಗಮ ದೃಶ್ಯ ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕ್ಷೇತ್ರಕ್ಕೆ ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರು ಕೂಡ ಸುಂದರ ನಂದಿನಿ ನದಿಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಕಟೀಲು ಕ್ಷೇತ್ರಕ್ಕೆ ಬರುವ ಭಕ್ತರ ಪಾಲಿಗೆ ಅತ್ಯಾಕರ್ಷಕ, ಮನೋಹರವಾಗಿ ಹರಿಯುವ ನಂದಿನಿ ನದಿಯ ದೃಶ್ಯ ಪುಳಕಿತರನ್ನಾಗಿ ಮಾಡುತ್ತಿದೆ. ಈ ವರ್ಷ ಸುರಿಯುತ್ತಿರುವ ಭಾರಿ ಮಳೆಗೆ ನಂದಿನಿ ನದಿ ಜೀವಕಳೆ ಪಡೆದುಕೊಂಡು ಸಮುದ್ರ ರಾಜನತ್ತ ವೇಗವಾಗಿ ಭೋರ್ಗೆರೆಯುತ್ತ, ಧುಮ್ಮಿಕ್ಕುವ ಸೊಬಗು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.