ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಮಹದೇಶ್ವರ ಕಾಲೋನಿ ಹಾಡಿಯಲ್ಲಿ ಪಾಪಣ್ಣ ಅವರ ಅಧ್ಯಕ್ಷತೆಯಲ್ಲಿ ಅರಣ್ಯಹಕ್ಕು ಸಮಿತಿ ನಾಮಫಲಕವನ್ನು ಅನಾವರಣ ಮಾಡಲಾಯಿತು.ನಿಸರ್ಗ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ಪ್ರಭು ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ-2006 ಜಾರಿಗೆ ಬಂದು 18 ವರ್ಷಗಳಾದರೂ ಇನ್ನೂ ಅನುಷ್ಠಾನವಾಗಿಲ್ಲ, ಇಂದು ನಾವು ಅರಣ್ಯ ಹಕ್ಕು ಕಾಯ್ದೆ-2006 ರ ಪ್ರಕಾರ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ಸಮಿತಿಯ ನಾಮಫಲಕ ಅನಾವರಣ ಮಾಡುತ್ತಿರುವುದು ತುಂಬಾ ಸಂತೋಷಕರ ವಿಷಯ. ಈ ಹಿನ್ನೆಲೆ ಅರಣ್ಯ ಹಕ್ಕು ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮೂಲದಾಖಲಾತಿಗಳು ಅತ್ಯವಶ್ವಕವಾಗಿದ್ದು, ಎಲ್ಲರೂ ಮೂಲದಾಖತಿಗಳನ್ನು ಮಾಡಿಸಿಕೊಳ್ಳಬೇಕೆಂದು ಕರೆ ನೀಡಿ, ಹಾಡಿಯ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಸಭೆ ಮಾಡಿ ತಮ್ಮ ಸಮಸ್ಯೆಗಳನ್ನು ತಾವೇ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಭೀಮನಹಳ್ಳಿ ಗ್ರಾಪಂ ಪಿಡಿಒ ಸಿದ್ದಯ್ಯ ಮಾತನಾಡಿ, ಹಾಡಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 2016ರಲ್ಲಿ 40 ಫಲಾನುಭವಿಗಳಿಗೆ ನಿವೇಶನಗಳು ಮಂಜೂರಾಗಿದ್ದು, ಇವರಲ್ಲಿ 31 ಜನರ ದಾಖಲಾತಿಗಳು ಸರಿಯಾಗಿದ್ದು, ಇದಕ್ಕೆ ಸಂಬಂಧಪಟ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಒಂದು ತಿಂಗಳೊಳಗಾಗಿ ಫಲಾನುಭವಿಗಳಿಗೆ ಶಾಸಕರ ಸಮ್ಮುಖದಲ್ಲಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುವುದು. ಉಳಿದ 9 ಫಲಾನುಭವಿಗಳು ದಾಖಲಾತಿಗಳನ್ನು ನೀಡಿದ ನಂತರ ಅವರಿಗೂ ನಿವೇಶನ ನೀಡಲು ಕ್ರಮವಹಿಸಲಾಗುವುದು ಎಂದರು.ಸಭೆಗೆ ಮುಖ್ಯಅಥಿತಿಯಾಗಿ ವೀರನಹೊಸಳ್ಳಿ ಉಪವಲಯ ಅರಣ್ಯ ಅಧಿಕಾರಿ ಮಾಲ್ತೇಶ್ ಭಾಗವಹಿಸಿ ಮಾತನಾಡಿ, ಈ ದಿನ ಹಾಡಿಯ ಜನರೆಲ್ಲರು ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡುತ್ತಿದ್ದು, ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದ್ದು, ಪೋಷಕರು ಮೊದಲು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ಕರೆ ನೀಡಿ, ಅರಣ್ಯ ಕಾಯ್ದೆ-2006 ರ ಪ್ರಕಾರ ಆದಿವಾಸಿಗಳಿಗೆ ಸಿಗಬೇಕಾದ ಎಲ್ಲ ಹಕ್ಕುಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ವನ್ಯ ಪ್ರಾಣಿಗಳಿಂದ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ ಹಾಗೂ ನಮ್ಮ ಇಲಾಖೆಯಿಂದ ನಿಮಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ನಿಸರ್ಗ ಸಂಸ್ಥೆಯ ಕಾರ್ಯಕರ್ತ ಚಿಕ್ಕತಿಮ್ಮನಾಯ್ಕ, ನಿರ್ಮಲಾ, ಗ್ರಾಪಂ ಅಧ್ಯಕ್ಷರಾದ ಭಾಗ್ಯಶಂಕರ, ಹಾಡಿಯ ಯಜಮಾನ ಮಹದೇವ, ಅರಣ್ಯಹಕ್ಕು ಸಮಿತಿ ಕಾರ್ಯದರ್ಶಿ ಉಮೇಶ್, ಸದಸ್ಯರಾದ ಲೋಕೇಶ್, ನಾಗರಾಜು, ಚುಂಚ, ಸ್ವಾಮಿ, ಜೋಗಯ್ಯ, ಶಿವಮಲ್ಲ, ಮಾದೇವ ನಾಗೇಂದ್ರ, ಕಲ್ಲೂರಮ್ಮ, ಪದ್ಮಾ, ಪುಷ್ಪ, ಮಾದೇವಿ, ನಿರ್ಮಲಾ ಮೊದಲಾದವರು ಭಾಗವಹಿಸಿದ್ದರು.