ಸಾರಾಂಶ
ಹೂವಿನಹಡಗಲಿ: ಕಳೆದ 20 ವರ್ಷಗಳಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ನೌಕರರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಟಿಎಚ್‌ಒ ಅವರಿಗೆ ಮನವಿ ನೀಡಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕ ಕಾರ್ಯದರ್ಶಿ ಬೀರಬ್ಬಿ ಮಹೇಶ, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ನೌಕರರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ, ಈ ಕುರಿತು ಆಡಳಿತರೂಢ ಸರ್ಕಾರಗಳಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದ್ದರೂ ಈವರೆಗೂ ಖಾಯಮಾತಿ ಮಾಡುತ್ತಿಲ್ಲ. ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಷ್ಕರವನ್ನ ಪ್ರತಿ ವರ್ಷ ಮಾಡುತ್ತಾ ಬಂದಿದ್ದೇವೆ. ಆಯಾ ಸಮಯದಲ್ಲಿ ಇದ್ದಂತಹ ಸರ್ಕಾರದ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ನಿರಾಸಕ್ತಿ ತೋರಿದ್ದು ವಿಷಾದನೀಯ ಎಂದರು.ಕಳೆದ ವರ್ಷ 40 ದಿನಕ್ಕಿಂತಲೂ ಹೆಚ್ಚು ಕಾಲ 28000 ನೌಕರರು ಮುಷ್ಕರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಂದಿನ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ, ಕೋವಿಡ್ -19 ರ ಸಮಯದಲ್ಲಿ ತಾವು ನೀಡಿದ ಸೇವೆಯನ್ನು ಪರಿಗಣಿಸಿ ಹಾಗೂ ನೀವು ಪಡೆಯುತ್ತಿರುವ ಕಡಿಮೆ ವೇತನವನ್ನು ನೋಡಿ, ನಿಮಗೆ ಅನ್ಯಾಯವಾಗುತ್ತಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಿಮ್ಮನ್ನು ಖಾಯಂಗೊಳಿಸುವ ಭರವಸೆ ನೀಡಿದ್ದರು. ಅವರದ್ದೆ ಸರ್ಕಾರ ಇದ್ದರೂ ಈವರೆಗೂ ನಮ್ಮನ್ನು ಖಾಯಂಗೊಳಿಸುವ ಯಾವುದೇ ಕ್ರಮ ಕೈಗೊಳ್ಳದಿದ್ದುದರಿಂದ ಅನುವಾರ್ಯವಾಗಿ, ಆ.15 ರಿಂದ ಕಪ್ಪು ಪಟೈ ಕಟ್ಟಿಕೊಳ್ಳುವುದರ ಮೂಲಕ ಕಾರ್ಯನಿರ್ವಹಿಸುತ್ತಿದ್ದೇವೆಂದು ಹೇಳಿದರು.
ತಾಲೂಕಿನ 100 ಕ್ಕೂ ಹೆಚ್ಚು ಎನ್.ಎಚ್.ಎಂ ಗುತ್ತಿಗೆ ನೌಕರರು ಮುಷ್ಕರ ಕೈಗೊಂಡಿದ್ದು, ಮನವಿ ಪತ್ರವನ್ನ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಪ್ನಾ ಕಟ್ಟಿ ಇವರಿಗೆ ಸಲ್ಲಿಸಿದರು.ಎನ್.ಎಚ್.ಎಂ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಹೈಕ ಉಸ್ತುವಾರಿ ಹಾಗೂ ತಾಲೂಕ ಕಾರ್ಯದರ್ಶಿ ಬಿ.ಈ.ಮಹೇಶಕುಮಾರ, ಜಿಲ್ಲಾ ಉಪಾಧ್ಯಕ್ಷೆ ಡಾ.ಎಸ್.ರಮ್ಯ, ಡಾ.ಅನಿತಾ, ಡಾ.ಅಕ್ಕಮ್ಮ, ಡಾ.ಗೀತಾ, ನಾಗರಾಜ, ಬಸವರಾಜ್, ಆಶಾ, ಹಮೀದಾ, ರೇಣುಕಾ, ಮಂಜುಳಾ, ಶಿವರಾಜ, ದಾಕ್ಷಾಯಿಣಿ, ಆರ್.ಬಿ.ಎಸ್.ಕೆ ಹಾಗೂ ಟಿ.ಎಚ್.ಒ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.