ಸಾರಾಂಶ
ಚನ್ನರಾಯಪಟ್ಟಣದ ನೊರನಕ್ಕಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೋಮಲಾಕ್ಷಿ ಪರಮೇಶ್ ಹಾಗೂ ಉಪಾಧ್ಯಕ್ಷರಾಗಿ ಎಸ್ ಕೆ ರಘು ಅವಿರೋಧವಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಎಸ್ ಕೆ ರಘು ಆಯ್ಕೆಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನೊರನಕ್ಕಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೋಮಲಾಕ್ಷಿ ಪರಮೇಶ್ ಹಾಗೂ ಉಪಾಧ್ಯಕ್ಷರಾಗಿ ಎಸ್ ಕೆ ರಘು ಅವಿರೋಧವಾಗಿ ಆಯ್ಕೆಗೊಂಡರು. ದಂಡಿಗನಹಳ್ಳಿ ಹೋಬಳಿಯ ನೊರನಕ್ಕಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕೋಮಲಾಕ್ಷಿ ಪರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಕೆ. ರಘು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾ ಅಧಿಕಾರಿ ಗಿರೀಶ್ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಣೆ ಮಾಡಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿದ ಅಲ್ಫೋನ್ ನಗರ ದಿನೇಶ್ ಮಾತನಾಡಿ, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭಾಶಯಗಳು ತಿಳಿಸಿದರು. ನೊರನಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು. ನೂತನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಹಾಸನ ಜಿಲ್ಲೆಯಲ್ಲಿ ನೊರನಕ್ಕಿ ಗ್ರಾಮ ಪಂಚಾಯತಿಯನ್ನು ಮಾದರಿ ಪಂಚಾಯಿತಿ ಮಾಡಲು ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಮಲಾಕ್ಷಿ ಪರಮೇಶ್, ಉಪಾಧ್ಯಕ್ಷರಾದ ಎಸ್ ಕೆ ರಘು, ಗ್ರಾಮ ಪಂಚಾಯತಿ ಸದಸ್ಯರಾದ ಜಬೀರ್ ಖಾನ್, ವಸಂತರಾಣಿ, ತಿಮ್ಮೇಗೌಡ, ಗಂಗಾಧರ್, ಮಂಜೇಗೌಡ, ಬಿ ಆರ್ ಸತೀಶ್, ನಿಂಗೇಗೌಡ, ಲಕ್ಷ್ಮೀಶ್, ಲಕ್ಷ್ಮಮ್ಮ, ಪುಟ್ಟತಾಯಮ್ಮ, ಗೀತಾ, ವೀಣಾ ಕೇಶವ, ಜೆಡಿಎಸ್ ಪಕ್ಷದ ಮುಖಂಡರಾದ ಅಲ್ಫೋನ್ ನಗರ ದಿನೇಶ್, ಪರಮೇಶ್, ಎನ್ ಬಿಂಡೆನಹಳ್ಳಿ ಸತೀಶ್, ನಾಡನಹಳ್ಳಿ ಚನ್ನಕೇಶವ, ಪರ್ವತಣ್ಣ, ರಾಜಣ್ಣ, ರಾಮಕೃಷ್ಣ, ಜಗದೀಶ್, ಕಾಂತರಾಜು, ಸಾಸಲುಪುರ ಅನಿಲ್ ಸೇರಿದಂತೆ ಇತರರು ಹಾಜರಿದ್ದರು.