ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುನಗರದ ಗಾಂಧಿನಗರ ಬಡಾವಣೆಯಲ್ಲಿರುವ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ 74ನೇ ಜನ್ಮದಿನವನ್ನು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಆಚರಿಸಲಾಯಿತು.ಹಿರಿಯ ರಂಗಭೂಮಿ ಕಲಾವಿದ ಡಾ. ಲಕ್ಷ್ಮಣ್‌ದಾಸ್‌ರವರು ಮಾತನಾಡಿ, ಇಂದು ನಮಗೆ ಸುದೀನ ಏಕೆಂದರೆ ಒಂದು ತಳ ಸಮುದಾಯದಿಂದ ಬಂದಂತಹ ವ್ಯಕ್ತಿ ಇಂದು ನಮ್ಮ ರಾಜ್ಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ ಅಂದರೆ ಗೃಹ ಸಚಿವರಾಗಿ ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಡಾ. ಜಿ.ಪರಮೇಶ್ವರರವರು 74 ನೇ ಜನ್ಮದಿನಾಚರಣೆಯನ್ನು ನಾವು ನಿಮ್ಮಗಳೊಂದಿಗೆ ಆಚರಿಸುತ್ತಿದ್ದೇವೆ ಎಂದರು.ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಿ.ಕೆ.ಇಂದ್ರುಕುಮಾರ್, ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಕಾರ್ಯಾಧ್ಯಕ್ಷ ಕೆಸ್ತೂರು ನರಸಿಂಹಮೂರ್ತಿರವರು ಮಾತನಾಡಿದರು.ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್ ಎಸ್, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಿರಣ್ ವೈ.ಎಸ್, ನಗರಾಧ್ಯಕ್ಷ ಮನು ಟಿ.ಎಲ್, ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಗೋವಿಂದರಾಜು ಕೆ, ಮುಖಂಡರಾದ ಇಲಾಸ್ ಅಹಮ್ಮದ್, ಮೊಯಿನ್ ಅಹಮ್ಮದ್, ರಂಗಶಾಮಯ್ಯ ಕೆ.ಎಸ್, ಟೈಲರ್ ಜಗದೀಶ್, ಗೂಳೂರು ರಾಜಣ್ಣ, ಜೆಬಿನೇಷನ್, ಹನುಮನರಸಯ್ಯ, ದಿಬ್ಬೂರು ಶ್ರೀನಿವಾಸ್, ಮಣ್ಣಪ್ಪ, ವಿಜಯ್ ಕುಮಾರ್, ಸಿದ್ಧಲಿಂಗಯ್ಯ ಕೆ.ಎನ್, ಗಂಗಾಧರ್, ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಜ್ಯೋತಿಎಸ್, ಶಿಕ್ಷಕರುಗಳಾದ ಶ್ರೀಮತಿ ಲಕ್ಷ್ಮಿದೇವಮ್ಮ, ಶ್ರೀಮತಿ ಯಮುನ ವೈ.ಎಲ್, ಕಾರ್ಯದರ್ಶಿ ಡಿ.ಆರ್.ಶಿವಕುಮಾರ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಇನ್ನಿತರರು ಉಪಸ್ಥಿತರಿದ್ದರು.