ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ದು, ಇದರ ಸದುಪಯೋಗಕ್ಕೆ ಮುಂದಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆಯಾದ ಎನ್.ಬಿ.ಜಯಲಕ್ಷ್ಮೀ ತಿಳಿಸಿದರು.ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶ್ರೀ ಭಗಾವನ್ ಮಹಾವೀರ್ ಜೈನ್ ಕಾಲೇಜು ಹಾಗೂ ಗಿಡ್ಡೇಗೌಡನ ಹಳ್ಳಿಯ ಗಾಸಫರ್ ಹಿರಿಯ ನಾಗರೀಕರ ಸೇವಾ ಕೇಂದ್ರ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಪೋಷಕರನ್ನು ಗೌರವಿಸಿನಮ್ಮ ಹಿರಿಯರು ನಮ್ಮ ಹೆಮ್ಮೆ. ಪ್ರಸ್ತುತ ದಿನಗಳಲ್ಲಿವಯಸ್ಸಾದ ಪೋಷಕರನ್ನು ವೃದ್ಧಾಶ್ರಮಗಳಿಗೆ ಸಾಗಹಾಕುತ್ತಿರುವುದು ಆತಂಕಕಾರಿ. ನಮ್ಮ ಬೆಳವಣಿಗೆಗೆ ಕಾರಣರಾದ ತಂದೆ ತಾಯಿ, ಅಜ್ಜ-ಅಜ್ಜಿ ಮತ್ತು ಹಿರಿಯರನ್ನು ಪ್ರೀತಿ ಹಾಗೂ ಗೌರವದಿಂದ ಕಾಣುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಗುರು-ಹಿರಿಯರ ಸೇವೆ ಮಾಡುವ ಸಂಕಲ್ಪವನ್ನು ತೊಡಬೇಕು. ಮಾತೃದೇವೋಭವ, ಪಿತೃ ದೇವೋಭವ ಎಂಬಂತೆ ಹಿರಿಯ ನಾಗರಿಕರನ್ನು ಉತ್ತಮವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ವಂಚನೆ ಮತ್ತು ದ್ರೋಹವೆಸಗದೆ ಅಚ್ಚುಕಟ್ಟಾಗಿ ಆರೈಕೆ ಮಾಡಬೇಕೆಂದು ಅವರು ಮನವಿ ಮಾಡಿದರು. ಹಿರಿಯ ನಾಗರಿಕರ ಹಕ್ಕುವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಹಿರಿಯ ನಾಗರಿಕರ ದಿನವು ಹಿರಿಯ ನಾಗರಿಕರನ್ನು ಗೌರವಿಸುತ್ತದೆ ಮತ್ತು ಆಚರಿಸುತ್ತದೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಗುರುತಿಸುತ್ತದೆ. ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಆರೋಗ್ಯಕರ ಮತ್ತು ಸುರಕ್ಷಿತ ಜೀವನವನ್ನು ನಡೆಸುವ ಹಕ್ಕಿದೆ ಎಂದು ಹೇಳಿದರು.ಹಿರಿಯ ನಾಗರಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳನ್ನು ನೀಡುತ್ತಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾದರೆ ಹಿರಿಯ ನಾಗರೀಕರ ಗುರುತಿನ ಚೀಟಿ ಪಡೆದುಕೊಂಡು ಸರಕಾರದಿಂದ ಸಿಗುವ ಎಲ್ಲ ಸೌಲತ್ತುಗಳನ್ನು ಪಡೆದುಕೊಳ್ಳಬೆಕೆಂದು ಕರೆ ನೀಡಿದರು.ಉಚಿತ ಬ್ಲಾಕೆಟ್ ವಿತರಣೆ
ಈ ಸಂದರ್ಭದಲ್ಲಿ ಶ್ರೀ ಮಹಾವೀರ್ ಜೈನ್ ಕಾಲೇಜಿನ ಸಂಸ್ಥಾಪಕರಾದ ಮಹೇಂದ್ರಜೈನ್ ಅವರ ವತಿಯಿಂದ ಹಿರಿಯ ನಾಗರೀಕರ ದಿನದ ಅಂಗವಾಗಿ ಉಚಿತ ಬ್ಲಾಕೇಟ್ ಕೊಡುಗೆಯನ್ನು ನೀಡಿ ಹಿರಿಯನ್ನು ಗೌರವಿಸಿದರು. ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್, ವಕೀಲರಾದ ಮಗೇಂದ್ರನ್, ಪರಮೇಶ್, ಗಾಸಫರ್ ವೃದ್ದಶ್ರಾಮದ ಆಡಳಿತಾಧಿಕಾರಿ ಎಫ್.ಎಸ್.ರುಬೀನ್ ಹಾಗೂ ಇನ್ನಿತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))