ಕನ್ನಡಪ್ರಭ ವಾರ್ತೆ ಮೈಸೂರು

ಹಲವಾರು ತಿಂಗಳಿಂದ ಮೈಸೂರು ಜಿಲ್ಲಾದ್ಯಂತ ಕೆಪಿಎಸ್- ಮ್ಯಾಗ್ನೆಟ್ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆದಿದೆ. ಇದರಲ್ಲಿ ನೂರಾರು ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತಮ್ಮೂರಿನ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಬೀದಿಗಿಳಿದು ಪ್ರತಿರೋಧ ಚಳವಳಿ ಮಾಡಿದ್ದರು. ಶಾಲೆಗಳನ್ನು ಮುಚ್ಚದಂತೆ, ವಿಲೀನಗೊಳಿಸದಂತೆ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಶಾಲೆಗಳು ಕೇವಲ ಕಟ್ಟಡಗಳಲ್ಲ ಬಡ ಹಾಗೂ ಕೂಲಿಕಾರ್ಮಿಕರ ಮಕ್ಕಳ ಶಿಕ್ಷಣದ ಆಸರೆ. ಮೈಸೂರು ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ನಡೆದ ತೀವ್ರ ಹೋರಾಟದ ಪ್ರತಿಫಲವಾಗಿ ಸೋಮವಾರ ಶಾಲೆಗಳು ಯಶಸ್ವಿಯಾಗಿ ಆರಂಭಗೊಂಡಿದೆ. ಶಾಲೆಯ ಮೊದಲ ದಿನ ವಿದ್ಯಾರ್ಥಿಗಳನ್ನು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯಿಂದ ಶಾಲೆಗಳಿಗೆ ಸ್ವಾಗತಿಸಲಾಯಿತು.ಜನ ಹೋರಾಟದಿಂದ ಶಾಲೆಗಳು ಉಳಿದುಕೊಂಡಿವೆ. ಆದರೆ, ಈ ಶಾಲೆಗಳು ಮುಂದೆಯೂ ವಿಲೀನಗೊಳ್ಳದಂತೆ ತಡೆಯಲು ಹಾಗೂ ಬಲಪಡಿಸಲು ಹೋರಾಟ ಮುಂದುವರೆಯಲಿದೆ ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ತಿಳಿಸಿದ್ದಾರೆ.