ತರೀಕೆರೆಪೋಷಕರ ಸಹಕಾರವೇ ಶಾಲೆ ಅಭಿವೃದ್ಧಿಗೆ ಕಾರಣ ಎಂದು ತರೀಕೆರೆ ಎಜುಕೇಶನ್ ಸೊಸೈಟಿ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಹೇಳಿದ್ದಾರೆ.
-ತರೀಕೆರೆ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ನ 51ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಪೋಷಕರ ಸಹಕಾರವೇ ಶಾಲೆ ಅಭಿವೃದ್ಧಿಗೆ ಕಾರಣ ಎಂದು ತರೀಕೆರೆ ಎಜುಕೇಶನ್ ಸೊಸೈಟಿ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಹೇಳಿದ್ದಾರೆ.ತರೀಕೆರೆ ಎಜುಕೇಶನ್ ಸೊಸೈಟಿಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ನ 51ನೇ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಲೆ ಅಭಿವೃದ್ಧಿಗೆ ಅನೇಕ ಹಿರಿಯರು ಶ್ರಮಿಸಿದ್ದಾರೆ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಮುನ್ನೆಡೆಯಲು ಇಷ್ಟವೋ ಅದೇ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಡಬೇಕೆಂದು ಹೇಳಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಸೇವಾ ಮನೋಭಾವದಿಂದ ಆರಂಭವಾದ ಪಟ್ಟಣದ ಎನ್.ಇಪಿಎಸ್ ಶಾಲೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಶತ ವರ್ಷಗಳನ್ನು ಆಚರಿಸಲಿ ಎಂದು ಹಾರೈಸಿದರು.ಶಿಕ್ಷಣ ಸರಕಾಗಬಾರದು, ವಿದ್ಯಾರ್ಥಿಗಳು ಗ್ರಾಹಕರಾಗಬಾರದು ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವ ದಿಂದ ಶಿಕ್ಷಣ ಕಲ್ಪಿಸಬೇಕು. ಶಿಕ್ಷಣ ಶ್ರೀಮಂತರ ಹಾಗೂ ಮೇಲ್ವರ್ಗದವರಿಗೆ ಸೀಮಿತ ವಾಗಿದ್ದ ಸಂದರ್ಭದಲ್ಲಿ ತರೀಕೆರೆ ಪಟ್ಟಣದ ಎನ್ ಇ ಎಚ್.ಪಿಎಸ್ ಶಾಲೆ ಬಡ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಅಸಮಾನತೆ ತೊಡೆದು ಹಾಕಿದೆ. ಸಂಸ್ಥೆಯಲ್ಲಿ ದುಡಿದ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕರು ಅನೇಕ ತ್ಯಾಗ ಹಾಗೂ ಸೇವೆ ಮೂಲಕ ಈ ವಿದ್ಯಾ ಸಂಸ್ಥೆ ಕಟ್ಟಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೂಲಕ ಯಶಸ್ಸು ತಂದಿದ್ದಾರೆ. ಶಾಲೆ ಯಶಸ್ಸು ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.ಪುರಸಭೆ ಸದಸ್ಯೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಶಾಲೆ ಐವತ್ತು ವರ್ಷದಿಂದ ನಡೆಯುತ್ತಿದೆ ಬಡವರಿಗೆ ಮದ್ಯಮ ವರ್ಗದವರಿಗೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿ.ಆರ್.ಪಿ.ಶಿಲ್ಪ ಮಾತನಾಡಿ ಶಾಲೆ ಬಗ್ಗೆ ತಮಗೆ ತುಂಬಾ ಹೆಮ್ಮ ಇದೆ. ವಾರ್ಷಿಕೋತ್ಸವದಲ್ಲಿ ಮಕ್ಕಳ ಪ್ರತಿಭೆ ನೋಡಿ ಪೋಷಕರು ಸಂತೋಷ ಪಡುತ್ತಾರೆ. ಫೋಷಕರು ಮಕ್ಕಳಿ ಗಾಗಿ ಸಮಯ ಕೊಟ್ಟು ಅವರ ಜೊತೆ ಸಂಭಾಷಣೆ ಮಾಡಬೇಕು ಎಂದು ಸಲಹೆ ನೀಡಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಚ್.ಲಕ್ಷ್ಮೀನಾರಾಯಣ, ನ್ಯಾಷನಲ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಟಿ.ವಿ. ರೇವಣ್ಣ ಮಾತನಾಡಿದರು.ಸಂಸ್ಥೆ ಕಾರ್ಯದರ್ಶಿ ಹೇಮಲತಾ ರೇವಣ್ಣ ವಾರ್ಷಿಕ ವರದಿ ವಾಚಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.
ನಳಿನಾ ಪಾಂಡುರಂಗ, ಲೇಖಕ ತ.ಮ.ದೇವಾನಂದ್, ಶಾಲೆ ಮುಖ್ಯ ಶಿಕ್ಷಕಿ ಲೀಲಾವತಿ, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 23ಕೆಟಿಆರ್.ಕೆ.3ಃತರೀಕೆರೆಯಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿಯಿಂದ ನಡೆದ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಸೊಸೈಟಿ ಅದ್ಯಕ್ಷ ಟಿ.ಎಂ. ವೆಂಕಟೇಶ್, ಉಪಾಧ್ಯಕ್ಷ ಟಿ.ವಿ.ರೇವಣ್ಣ, ಕಾರ್ಯದರ್ಶಿ ಹೇಮಲತಾ ಪೇವಣ್ಣ, ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಗಿರಿಜಾ ಪ್ರಕಾಶ್ ವರ್ಮ ಭಾಗವಹಿಸಿದ್ದರು.