ಚನ್ನಪಟ್ಟಣ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮಕ್ಕಳಿಗೆ ಹಣ, ಆಸ್ತಿ ಮಾಡಿಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದು, ಶಿಕ್ಷಣದ ಜತೆಗೆ ಅವರ ದಿನಚರಿ ಕುರಿತು ಗಮನ ಹರಿಸಬೇಕು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ಚನ್ನಪಟ್ಟಣ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮಕ್ಕಳಿಗೆ ಹಣ, ಆಸ್ತಿ ಮಾಡಿಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದು, ಶಿಕ್ಷಣದ ಜತೆಗೆ ಅವರ ದಿನಚರಿ ಕುರಿತು ಗಮನ ಹರಿಸಬೇಕು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ನಗರದ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಫೋಷಕರು ಮಕ್ಕಳ ಕೈಗೇ ಮೊಬೈಲ್‌ ಕೊಡುವುದು ಬಿಟ್ಟು, ಅವರ ಹವ್ಯಾಸಗಳತ್ತ ಗಮನ ಹರಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಗುಣವಂತರಾಗಲು ಸಾಧ್ಯ ಎಂದರು.

ಶಾಸಕ ಯೋಗೇಶ್ವರ್ ಮಾತನಾಡಿ, ಇಂದು ನಾವೆಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಹಾಗೂ ಕೌಶಲ್ಯ ಪ್ರತಿಭೆಗೆ ತಕ್ಕಂತೆ ಶಿಕ್ಷಣ ಕೊಡುವುದು ಶಿಕ್ಷಣ ಸಂಸ್ಥೆ ಮತ್ತು ಪೋಷಕರ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಎಸ್.ಲಿಂಗೇಶ್ ಕುಮಾರ್ ಅವರ ಸೇವೆ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಹಾಪ್‌ಕಾಮ್ಸ್ ಅಧ್ಯಕ್ಷ ಕೋಡಂಬಹಳ್ಳಿ ಶಿವಮಾದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ನಟಿ ಸಂಜನಾ ಆನಂದ್. ಕುಕ್ಕಟ ಮಹಾಮಂಡಳಿ ಮಾಜಿ ಅಧ್ಯಕ್ಷ ಡಿ. ಕೆ ಕಾಂತರಾಜು, ನಗರಸಭಾ ಸದಸ್ಯೆ ಮಂಗಳಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ಲಿಂಗೇಶ್ ಕುಮಾರ್, ಕಾರ್ಯದರ್ಶಿ ಚಿತ್ರಾಲಿಂಗೇಶ್ ಕುಮಾರ್, ಟ್ರಸ್ಟಿ ಎಲ್. ಕ್ಷಮಾ, ಎಲ್. ಮೋನಿಷ್, ಎಂ.ಎನ್.ಸತ್ಯನಾರಾಯಣ್ ಇತರರಿದ್ದರು.

ಬಾಕ್ಸ್..............

ರೈತರ ಏಳಿಗೆಗೆ ನಂದಿನಿ ಉತ್ಪನ್ನ ಬಳಸಿ

ನಂದಿನಿ ನಾಡಿನ ಹೆಮ್ಮೆಯಾಗಿದ್ದು ವಿದ್ಯಾರ್ಥಿಗಳು ನಂದಿನಿ ಉತ್ಪನ್ನಗಳನ್ನು ಬಳಸುವ ಮೂಲಕ ನಂದಿನಿಯನ್ನು ಬೆಳೆಸಿ ರೈತರ ಏಳಿಗೆಗೆ ಶ್ರಮಿಸಬೇಕು. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಹುತೇಕರು ರೈತರ ಮಕ್ಕಳಾಗಿದ್ದು ನಿಮಗೆ ನಿಮ್ಮ ಪೋಷಕರ ಕಷ್ಟ ತಿಳಿದಿದೆ. ಈ ನಿಟ್ಟಿನಲ್ಲಿ ನೀವೆಲ್ಲಾ ನಂದಿನಿ ಉತ್ಪನ್ನಗಳನ್ನು ಬಳಸಬೇಕು ಎಂದು ಸುರೇಶ್‌ ಹೇಳಿದರು.

ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲ ತಾಣಗಳ ಬಳಕೆ ಬಗ್ಗೆ ಸಾಕಷ್ಟು ಅರಿವು ಹೊಂದಿದ್ದಾರೆ. ಅದರಲ್ಲೂ ರೀಲ್ಸ್ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ನಿಮ ಪ್ರತಿಭೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಫೆಬ್ರುವರಿ ತಿಂಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನಕೋತ್ಸವದಲ್ಲಿ ನಂದಿನಿ ಹಾಲಿನ ಬಗ್ಗೆ ರೀಲ್ಸ್ ಮಾಡುವ

ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ನೀವು ನಂದಿನಿ ಉತ್ಪನ್ನಗಳನ್ನು ಬಳಸುವ ಬಗ್ಗೆ ಹೈನೋದ್ಯಮದ ಬಗ್ಗೆ ಉತ್ತಮ ಕಿರುಚಿತ್ರದ ರೀಲ್ಸ್ ಮಾಡಿ ೧ ಲಕ್ಷ ರು. ಬಹುಮಾನ ಪಡೆಯಬಹುದೆ ಎಂದರು.

ಬಾಕ್ಸ್ .....................

ನನಗೆ ಸಿಪಿವೈ ರೆಸ್ಟ್ ಕೊಡಿಸಿದ್ದಾರೆ: ಡಿಕೆಸು

ಕ್ಷೇತ್ರದ ಶಾಸಕ ಯೋಗೇಶ್ವರ್ ಅವರು ನನಗೆ ರೆಸ್ಟ್ ಕೊಡಿಸಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲಿ ಯೋಗೇಶ್ವರ್ ಅವರನ್ನು ನಗುತ್ತಲೇ ಕಿಚಾಯಿಸಿದರು.

ನಿಮ್ಮ ಪೋಷಕರು ನನ್ನನ್ನು ಮೂರು ಬಾರಿ ಸಂಸದನನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಅವಕಾಶ ಮಾಡಿಕೊಟ್ಟಿದ್ದರು. ನನ್ನ ಅವಧಿಯಲ್ಲಿ ಕೈಲಾದಷ್ಟು ಅಭಿವೃದ್ಧಿ ಮಾಡಿದ ತೃಪ್ತಿ ಇದೆ ಎಂದರು.

ಶಾಸಕ ಯೋಗೇಶ್ವರ್ ಮಾತನಾಡಿ, ಡಿ.ಕೆ.ಸುರೇಶ್ ಸಂಸದರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯುವಂತವು. ಡಿ.೨೬ರಂದು ಪಟ್ಟಣದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದ್ದು ಇದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಸುರೇಶ್ ಅವರು ಮುಂದೆ ಸಂಸದರಾಗುವುದು ನಿಶ್ವಿತ ಎಂದು ಭವಿಷ್ಯ ನುಡಿದರು.

ಪೊಟೋ೨೧ಸಿಪಿಟಿ೧:

ಚನ್ನಪಟ್ಟಣದ ಕೇಂಬ್ರಿಡ್ಜ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.