ಸಾರಾಂಶ
ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರಷ್ಟೆ ಪೋಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೋಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ, ಶಿಸ್ತು, ಧೈರ್ಯಗಳನ್ನು ಮಕ್ಕಳಿಗೆ ಧಾರೆಯೆರೆಯಬೇಕು. ಯಾವ ಕಾರಣಕ್ಕೂ ಮಕ್ಕಳ ಮುಂದೆ ಜಗಳ ಆಡಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಾಗರಿಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿಸಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಇಲ್ಲಿ ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಅಭಿಪ್ರಾಯಪಟ್ಟರು. ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಆಕಾಶ್ ಗ್ಲೋಬಲ್ ಸ್ಕೂಲ್ ವತಿಯಿಂದ ಏರ್ಪಡಿಸಿದ್ದ ವುಮೆನ್ ಅರೌಂಡ್ ದ ವರ್ಲ್ಡ್ ಶೀರ್ಷಿಕೆಯಲ್ಲಿ ನಡೆದ 11ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗೆ ಬದ್ಧತೆ, ಶಿಸ್ತು ಕಲಿಸಿ
ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರಷ್ಟೆ ಪೋಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೋಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ, ಶಿಸ್ತು, ಧೈರ್ಯಗಳನ್ನು ಮಕ್ಕಳಿಗೆ ಧಾರೆಯೆರೆಯಬೇಕು. ಯಾವ ಕಾರಣಕ್ಕೂ ಮಕ್ಕಳ ಮುಂದೆ ಜಗಳ ಆಡಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು.ಮಕ್ಕಳ ಹಕ್ಕು ರಕ್ಷಿಸಬೇಕು
ಮುಕ್ತಾ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕಿ ಡಾ.ಎನ್.ವಿ.ಅಶ್ವಿನಿ ಮಾತನಾಡಿ, ಪುರುಷನಿರಲಿ ಮಕ್ಕಳಿರಲಿ ಅವರ ಯಶಸ್ಸಿನ ಹಿಂದೆ ತಾಯಿ ಇದ್ದೇ ಇರುತ್ತಾಳೆ. ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಬೇರೆಯವರ ಹಕ್ಕಿನ ಉಲ್ಲಂಘನೆ ಮಾಡದಂತೆ, ನಮ್ಮ ಹಕ್ಕುಗಳ ಉಲ್ಲಂಘನೆಯೂ ಆಗದಂತೆ ಜಾಗ್ರತೆ ವಹಿಸುವ ಬಗ್ಗೆ ಕಲಿಸಬೇಕು ಎಂದರು.ಈ ವೇಳೆ ಹಿರಿಯ ಸ್ತ್ರೀರೋಗ ತಜ್ಞೆ ಡಾ.ಸುಶೀಲಾಮೂರ್ತಿ, ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎನ್.ವಿನಯ್,ಸಿಟಿ ಸಿವಿಲ್ ಕೋರ್ಟ್ ಅಭಿಯೋಜಕ ಮಹಾಲಿಂಗಪ್ಪ ಉತ್ತೂರು, ಟಿಪಿಎಸ್ ಮಾಜಿ ಅಧ್ಯಕ್ಷ ಮೂರ್ತಿ, ಗಂಗರಾಜು, ಆಕಾಶ್ ಗ್ಲೋಬಲ್ ಶಾಲೆ ಸಂಸ್ಥಾಪಕ ಕೆ.ವಿ.ವಾಸುದೇವ್, ವಿದ್ಯಾರ್ಥಿಗಳು, ಪೋಷಕರು ಇದ್ದರು.