ಪೋಷಕರು ಮಕ್ಕಳಿಗೆ ಶಿಸ್ತು, ಸಂಯಮ ಕಲಿಸಬೇಕು

| Published : Feb 12 2024, 01:32 AM IST

ಸಾರಾಂಶ

ಮಕ್ಕಳಿಗೆ ಇಂದಿನ ದಿನಗಳಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು, ಪೋಷಕರು ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸದ ಜೊತೆಗೆ ಆಟ, ಪಾಠ, ನಡತೆ ಇವೆಲ್ಲವನ್ನೂ ಸಹ ಕಾಲ ಕಾಲಕ್ಕೆ ತಿಳಿಸಬೇಕು. ಗುಣಮಟ್ಟದ ಶಿಕ್ಷಣ ನೀಡಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪೋಷಕರು‌ ಮಕ್ಕಳಿಗೆ ಶಾಲೆಯ ಶಿಕ್ಷಕರಂತೆ ಶಿಸ್ತು ಸಂಯಮ ಪಾಲನೆ ಮಾಡಲು ಗಮನ ಹರಿಸಬೇಕೆಂದು ಕನ್ನಡ ಮತ್ತು ತೆಲುಗು ಚಲನಚಿತ್ರ ರಂಗದ ನಿರ್ದೇಶಕ ಓಂಸಾಯಿ ಪ್ರಕಾಶ್ ತಿಳಿಸಿದರು.ನಗರದ ಪ್ರಶಾಂತ ನಗರದ ಪ್ರಕೃತಿ ವಿದ್ಯಾನಿಕೇತನ‌ ಶಾಲೆಯಲ್ಲಿ 17ನೇ ವಾರ್ಷಿಕ ಪ್ರಕೃತಿ ಸಂಭ್ರಮ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ,ಮಕ್ಕಳಿಗೆ ಇಂದಿನ ದಿನಗಳಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು, ಪೋಷಕರು ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸದ ಜೊತೆಗೆ ಆಟ, ಪಾಠ, ನಡತೆ ಇವೆಲ್ಲವನ್ನೂ ಸಹ ಕಾಲ ಕಾಲಕ್ಕೆ ತಿಳಿಸುತ್ತಾ ಬರಬೇಕು ಎಂದು ತಿಳಿಸಿದರು.ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಡಾ.ಎನ್.ಭಾಸ್ಕರ್ ಮಾತನಾಡಿ, 16 ವರ್ಷಗಳಿಂದ ಈ ಶಾಲೆ ಈ ಭಾಗದ ಎಲ್ಲಾ ವರ್ಗದ‌ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಮಕ್ಕಳು ಉನ್ನತ ಮಟ್ಟಕ್ಕೇರಲು ಕಾರಣವಾಗಿದೆ, ಸುಸಜ್ಜಿತ ಕಟ್ಟಡ ಹೊಂದಿದ್ದು, ಗುಣ ಮಟ್ಟದ‌ ಶಿಕ್ಷಣ ನೀಡುತ್ತಿದ್ದು, ಉತ್ತಮ ಪ್ರಜೆಗಳಾಗಿದ್ದಾರೆ ಎಂದರು.ಶಾಲಾ ಪ್ರಾಂಶುಪಾಲ ವೈ.ವಿ.ಆನಂದ್ ಮಾತನಾಡಿ, ನಮ್ಮ ಶಾಲೆಯು ಮಕ್ಕಳ ಶಿಕ್ಷಣದ‌ ಜೊತೆಯಲ್ಲಿ ಸಾಂಸ್ಕೃತಿಕ, ಶಿಕ್ಷಣೇತರ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳನ್ನು ಅಯೋಜಿಸುತ್ತಾ ಬಂದಿದ್ದೇವೆ. ಎಸ್.ಎಸ್.ಎಲ್.ಸಿ ಯಲ್ಲಿ ಸಹ ಮಕ್ಕಳು ಕಳೆದ ಮೂರು ವರ್ಷಗಳಿಂದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವುದು ಹರ್ಷ ತಂದಿದೆ ಎಂದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಎಸ್.ಎಂ.ಸುಧಾ. ಶಾಲಾ ಶಿಕ್ಷಕರು, ಸಿಬ್ಬಂದಿ, ಪೋಷಕರು, ಮಕ್ಕಳು ಇದ್ದರು.