ಹೆಣ್ಣು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು, ಜತೆಗೆ ಶಿಕ್ಷಣ ಕೊಡಿಸುವುದರ ಬಾಲ್ಯ ವಿವಾಹದಂತಹ ಪೀಡುಗು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು

ಹೂವಿನಹಡಗಲಿ: ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು, ಪೌಷ್ಟಿಕ ಆಹಾರ, ಸುರಕ್ಷಿತ ವಾತಾವರಣ ಒದಗಿಸುವುದು ಕುಟುಂಬ ಹಾಗೂ ಸಮಾಜದ ಜವಾಬ್ದಾರಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಗಂಗಪ್ಪ ಹೇಳಿದರು.

ತಾಲೂಕಿನ ಕೆ. ಅಯ್ಯನಹಳ್ಳಿಯಲ್ಲಿ ಯೋಜಿಸಿದ್ದ ಬಾಲಮೇಳ, ಬೇಟಿ ಬಚಾವ್ ಬೇಟಿ ಪಡಾವೋ ಮತ್ತು ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು, ಜತೆಗೆ ಶಿಕ್ಷಣ ಕೊಡಿಸುವುದರ ಬಾಲ್ಯ ವಿವಾಹದಂತಹ ಪೀಡುಗು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಕುಟುಂಬ ಸಮಾಜದ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಮೇಲ್ವಿಚಾರಕಿ ಹನುಮಕ್ಕ ದೊಡ್ಡಮನಿ ಮಾತನಾಡಿದರು. ಗ್ರಾಪಂ ಪಿಡಿಒ ಮಹ್ಮದ್ ರಫಿ, ಮೇಲ್ವಿಚಾರಕಿ ಶೋಭಾ, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಶೋಭಾ, ಅನ್ನಪೂರ್ಣ, ಶಿವರಾಜ್, ಅಂಗನವಾಡಿ ಫೆಡರೇಷನ್‌ ತಾಲೂಕಾಧ್ಯಕ್ಷೆ ಜಯಲಕ್ಷ್ಮಿ ಇತರರಿದ್ದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಇದೇ ವೇಳೆ ಜಾಗೃತಿ ಮೂಡಿಸಲಾಯಿತು.