ಪರ್ಕಳ: ಜೆಸಿಐ ಪರ್ಕಳ, ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಹಾಗೂ ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳ ಇವುಗಳ ಸಹಯೋಗದಲ್ಲಿ ನಡೆದ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್‍ಯಕ್ರಮ ಸೋಮವಾರ ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು.

ಕಾರ್‍ಯಕ್ರಮದಲ್ಲಿ ಶಿಬಿರದಲ್ಲಿ ಆಯ್ಕೆಯಾದ 88 ಮಂದಿ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.ಕಾರ್‍ಯಕ್ರಮದಲ್ಲಿ ಜೆಸಿಐ ಪರ್ಕಳದ ಅಧ್ಯಕ್ಷ ಭರತ್ ಕೆ. ಕುಲಾಲ್, ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಣೈ. ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ಕೂಡ್ಲು. ಜೆಸಿಐ ಪರ್ಕಳದ ಪೂರ್ವ ಅಧ್ಯಕ್ಷರಾದ ರಮ್ಯ ನಾಯಕ್ ಉಪಸ್ಥಿತರಿದ್ದರು..