ಸಾರಾಂಶ
ಜಾತ್ಯತೀತ ಹಾಗೂ ಸರ್ವಧರ್ಮಗಳ ಸಮನ್ವಯತೆಗಳನ್ನು ಸಾರುವ ದೇಶದ ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಮತ್ತು ಸಂಘಪರಿವಾರದ ನಡೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಇತ್ತೀಚೆಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
- ಬಿಜೆಪಿ, ಸಂಘ ಪರಿವಾರಗಳ ವಿರುದ್ಧ ಹೊನ್ನಾಳಿಯಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜಾತ್ಯತೀತ ಹಾಗೂ ಸರ್ವಧರ್ಮಗಳ ಸಮನ್ವಯತೆಗಳನ್ನು ಸಾರುವ ದೇಶದ ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಮತ್ತು ಸಂಘಪರಿವಾರದ ನಡೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಇತ್ತೀಚೆಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಮಿತಿ ಪ್ರಧಾನ ಸಂಚಾಲಕ ಮಂಜುನಾಥ ಕುರುವ ಮಾತನಾಡಿ, 1950ರ ದಶಕದಲ್ಲಿಯೇ ಡಾ.ಅಂಬೇಡ್ಕರ್ ಯಾವುದೇ ಕಾರಣಕ್ಕೂ ಸಂಘಪರಿವಾರ ಹಾಗೂ ಹಿಂದೂ ಮಹಾಸಭಾಗಳಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಸೂಚನೆ ನೀಡಿದ್ದರು ಎಂದು ಹೇಳಿದರು.
ಭಾರತದ ಸಂವಿಧಾನವನ್ನು ವಿಶ್ವವೇ ಕೊಂಡಾಡಿದ್ದರೂ ಮನುವಾದಿಗಳು ಮಾತ್ರ ಟೀಕಿಸಿದ್ದರು. ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಶೋ ಎಸೆಯುವ ಮೂಲಕ ಸಂವಿಧಾನ ಕಾಪಾಡುವ ನ್ಯಾಯಾಪೀಠಕ್ಕೆ ಅಪಚಾರ ಎಸಗುವ ಕೆಲಸ ಮಾಡಿದೆ. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.ಸಮಿತಿ ಹಕ್ಕೋತ್ತಾಯಗಳು:
ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಂಘ ಪರಿವಾದವರು ಸರ್ಕಾರದ ಷರತ್ತುಬದ್ಧ ನಿಯಮಗಳನ್ನು ಮೀರಿದರೆ ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೋ ಎಸೆದ ವಕೀಲರನ್ನು ಬಂಧಿಸಿ ಕ್ರಮ ಜರುಗಿಸಬೇಕು. ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದಲ್ಲಿ 75 ಕುಟುಂಬಗಳ ಶಿಳ್ಳಿ ಕ್ಯಾತ ಜನಾಂಗದವರು 50 ವರ್ಷಗಳಿಂದ ವಾಸವಾಗಿದ್ದು, ಅವರಿಗೆ ನಿವೇಶನಗಳನ್ನು ಮಂಜೂರು ಮಾಡಿಕೋಡಬೇಕು, ಹೊನ್ನಾಳಿ ಮತ್ತು ನ್ಯಾಮತಿಗಳಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳ ಮನವಿಯನ್ನು ತಹಶೀಲ್ದಾರ್ ಮಂಜುನಾಥ ಅವರಿಗೆ ಸಲ್ಲಿಸಲಾಯಿತು.ತಾಲೂಕು ಸಮಿತಿ ಉಪ ಪ್ರಧಾನ ಸಂಚಾಲಕ ಜಗದೀಶ್ ಕುಂಬಳೂರು, ಖಜಾಂಚಿ ನಾಗರಾಜ್ ಮಾಸಡಿ, ಕುರ್ಲತ್ ಉಲ್ಲಾ ಖಾನ್, ನಾಗರಾಜ್, ರಂಗನಾಥ, ಮಲೆಕುಂಬಳೂರು ಕೃಷ್ಣಮೂರ್ತಿ, ಚಂದ್ರಮ್ಮ, ಜಯಮ್ಮ, ಶಾರದಮ್ಮ ಹಾಗೂ ಇತರರು ಇದ್ದರು.
- - --10ಎಚ್.ಎಲ್.ಐ2.ಜೆಪಿಜಿ:
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ಹಕ್ಕೊತ್ತಾಯಗಳೊಂದಿಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.;Resize=(128,128))
;Resize=(128,128))
;Resize=(128,128))