ಸಾರಾಂಶ
ಹಿರೇಕೆರೂರು: ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ಹೇಳಿದರು. ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಯಶಸ್ಸಿಯ ಭಾಗಿಗಳಾಗಬೇಕು. ಸ್ವ ಇಚ್ಚೇಯಿಂದ ಮೇ 7ರಂದು ತಮ್ಮ ಮತಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದಂತೆ ಮುಕ್ತ, ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದರು. ಬಳಿಕ ಪ್ರತಿಜ್ಞಾವಿಧಿ ಬೋಧಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಾದ 150, 149, 147, 148, 144, 145, ಮತಗಟ್ಟೆಗಳ ವ್ಯಾಪ್ತಿಯಲ್ಲಿ ಡೊಳ್ಳು ಬಾರಿಸುತ್ತ ಪಂಜು, ಮೇಣದಬತ್ತಿ ಮೆರವಣಿಗೆ ನಡೆಸಿದರು. ರಾವಣ, ಕೆಂಪೇಗೌಡರ ವೇಷಧಾರಿಗಳು ಇದ್ದರು. ಭಾರತ ನಕ್ಷೆ ಬಿಡಿಸಿ, ಮೊಬೈಲ್ ಟಾರ್ಚ್ ಬೆಳಗಲಾಯಿತು. ಮತದಾನ ಮಾಡುವಂತೆ ಆಯಾ ಮತಗಟ್ಟೆ ವ್ಯಾಪ್ತಿಗಳ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಎಸ್. ನಾರಾಯಣ, ಸಹಾಯಕ ಚುನಾವಣಾಧಿಕಾರಿ ಡಾ. ಎಲ್. ನಾಗರಾಜ, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಬಿಎಒ ಎನ್. ಶ್ರೀಧರ, ಎಇಇ ನಂದೀಶ, ಟಿಎಚ್‌ಒ ಡಾ. ಝಡ್.ಆರ್. ಮಕಾನದಾರ, ಸಿಪಿಐ ಲಕ್ಷ್ಮೀಪತಿ, ಪಿಎಸ್‌ಐ ಎನ್.ಬಿ. ನರಲಾರ್, ಅಧಿಕಾರಿಗಳಾದ ಗೀತಾ ಬಾಳಿಕಾಯಿ, ಮೆಹಬೂಬ್‌ಸಾಬ್ ನದಾಫ್, ಸಮತಾ ಐರಣಿ, ಗಿರೀಶ್ ಓಲೇಕಾರ, ಬೂದಿಗೌಡ ಪಾಟೀಲ್, ಕೋಡಿ ಭೀಮರಾಯ, ಯಶೋದಾ ಟಿ.ಎಂ., ಮಾರುತೆಪ್ಪ ಕೆ.ಎಚ್., ತಾಪಂ ಸಿಬ್ಬಂದಿ ಜಿ.ಎಸ್. ಸೊರಟೂರು, ಚಂದ್ರಶೇಖರ ಕನ್ನಪ್ಪಳವರ, ಆನಂದ ಗರಡಿ, ಶಂಭು ಕಡ್ಲಿಕೊಪ್ಪ, ಚಂದ್ರಯ್ಯ ಸಿ.ಕೆ. ಚನ್ನಬಸಪ್ಪ ಸಿಂಗ್ರೇರ, ಪಪಂ ಸಿಬ್ಬಂದಿ ಸಿ.ಎಂ. ಪುಟ್ಟಕ್ಕಳವರ, ಮಹೇಂದ್ರ ಎಂ., ಪ್ರವೀಣ ಕೆ., ರವೀಂದ್ರ ಎಂ.ಟಿ., ರಾಘವೇಂದ್ರ ಹಂಚಿನಮನಿ, ಈಶ್ವರ ಬಡಿಗೇರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.