ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ಪ್ರಾಪ್ತಿ

| Published : Feb 12 2025, 12:31 AM IST

ಸಾರಾಂಶ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಉತ್ರರಖಂಡ ಊಖಿಮಠದ ಕೇದಾರನಾಥ ಶೀರಾವುಲು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶೀರಾವುಲು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಅರಸೀಕೆರೆ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಉತ್ರರಖಂಡ ಊಖಿಮಠದ ಕೇದಾರನಾಥ ಶೀರಾವುಲು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೂ ಧರ್ಮ, ಕಾಯಕ ಪ್ರಜ್ಞೆ ಅಗತ್ಯವಿದೆ. ಕೇದಾರನಾಥ ಎನ್ನುವ ಶಬ್ದ ಸ್ವರ್ಗದ ಬಾಗಿಲು ತೆರೆಯುವುದು ಎಂದರ್ಥ. ಎಲ್ಲರಿಗೂ ಸುಕ್ಷೇತ್ರ ಕೇದಾರನಾಥ ದರ್ಶನ ಸಾಧ್ಯವಿಲ್ಲ ಎನ್ನುವ ಕಾರಣದಿಂದಾಗಿ ಅರಸೀಕೆರೆ ತಾಲೂಕಿನಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರುಪಂಚಪೀಠ ಭಕ್ತರು, ಆಸ್ತಿಕರ ಆಧ್ಯಾತ್ಮಿಕ ತಾಣವಾಗಿದೆ. ನೀರು, ಅನ್ನ. ಸಾಮಾನ್ಯವಾಗಿದ್ದರೆ, ಭಸ್ಮ, ರುದ್ರಾಕ್ಷಿ, ಲಿಂಗ ವೀರಶೈವ ಲಿಂಗಾಯತರ ಪ್ರಮುಖ ಆಚರಣೆಯಾಗಿದೆ. ಇದಲ್ಲದೇ ಆರು ಲಿಂಗಗಳು ಪ್ರತ್ಯೇಕವಾಗಿದ್ದು ಎಲ್ಲವನ್ನೂ ಮುಟ್ಟುವ ಶಕ್ತಿ ಹೊಂದಿವೆ. ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳು ಮನುಷ್ಯನನ್ನು ಆವರಿಸಿವೆ. ರುದ್ರಾಕ್ಷಿ ದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.ದೈವಾನುಗ್ರಹ ಪಡೆಯಲು ಇಂತಹ ಧಾರ್ಮಿಕ ಆಚರಣೆಗಳು ಅಗತ್ಯವಿದೆ ಎಂದು ಪ್ರತಿಪಾದಿಸಿದರು. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಮುಂದಾಗಿದ್ದವರಿಗೆ ಈಗಾಗಲೇ ಉತ್ತರ ದೊರೆತಿದೆ. ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಅರಸೀಕೆರೆಯಲ್ಲಿ ಹೆಣ್ಣು ಮಕ್ಕಳು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಕುಂಭ ಹೊತ್ತು ಸ್ವಾಗತಿಸಿದರು. ಇಂತಹ ಅವಿಸ್ಮರಣೀಯ ಕ್ಷಣಕ್ಕೆ ತಾವೆಲ್ಲರೂ ಸಾಕ್ಷಿಯಾಗಿದ್ದೀರಿ. ಬದುಕಿನಲ್ಲಿ ದಾನ ಧರ್ಮ ಮಾಡುವ ಪರಂಪರೆಯ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಶ್ರೀ ಕರಿವೃಷಭ ಶಿವಯೋಗಿಶ್ವರ ಸ್ವಾಮೀಜಿ, ಗವಿಮಠ ಕಣ್ಣು ಕುಪ್ಪೆ,ನಾಲ್ವಡಿ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಶಿಶೇಖರ ಸಿದ್ಧಬಸವ ಶ್ರೀ, ದೊಡ್ಡಗುಣಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ನುಗ್ಗೆಹಳ್ಳಿ ಶಿವಪ್ರಕಾಶ ಶ್ರೀ, ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಮುರುಂಡಿ ಶಿವಯ್ಯ, ಅಣ್ಣೇನಹಳ್ಳಿ ಸಿದ್ದರಾಜು, ಗಂಡಸಿ ಷಡಕ್ಷರಿ, ಬಿ.ಪಿ.ಸುರೇಶ್, ಮಂಜುನಾಥ್, ಪ್ರವೀಣ್, ಶಿಲ್ಪಾ ಸತೀಶ್ ಇದ್ದರು.

ಪೋಟೋ

ಅರಸೀಕೆರೆ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಶೀರಾವುಲು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು