ನೊಂದವರ ಪರ ಕೆಲಸ ಮಾಡಿ

| Published : Oct 27 2025, 01:15 AM IST

ಸಾರಾಂಶ

ಟಿ.ಮರಿಯಪ್ಪ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಂಡಿದ್ದು

ಕನ್ನಡಪ್ರಭ ವಾರ್ತೆ ಕೆ.ಆರ್‌.ನಗರ

ಸಮಾಜ ಸೇವೆ ಮಾಡುವ ಉದ್ಧೇಶದಿಂದ ಸಂಘಗಳು ಮತ್ತು ಟ್ರಸ್ಟ್‌ ಗಳನ್ನು ರಚಿಸಿಕೊಳ್ಳುವವರು ಸದಾ ನೊಂದವರು ಮತ್ತು ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಬೆಂಗಳೂರು ಉಪ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕೆ.ಜೆ. ಶ್ರೀಧರನಾಯಕ ಹೇಳಿದರು.

ಪಟ್ಟಣದ ಸುಭಾಷ್‌ನಗರದ ಪರ್ವ ಫಂಕ್ಷನ್ ಹಾಲ್‌ ನಲ್ಲಿ ಭಾನುವಾರ ನಡೆದ ಎಸ್‌.ಬಿ.ಎಂ ಗೆಳೆಯರ ಬಳಗ ಚಾರಿಟಬಲ್ ಟ್ರಸ್ಟ್‌‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಳ್ಳವರು ನೊಂದವರಿಗೆ ಮಾಡುವ ಸಹಾಯ ಶಾಶ್ವತವಾಗಿರುತ್ತದೆ ಎಂದರು.

ಕಳೆದ 30 ವರ್ಷಗಳ ಹಿಂದೆ ಪಟ್ಟಣದ ಮಧುವನಹಳ್ಳಿಯ ಟಿ. ಮರಿಯಪ್ಪ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಜನಸೇವೆ ಮಾಡುವ ಉದ್ಧೇಶದಿಂದ ರಚಿಸಿಕೊಂಡಿರುವ ಚಾರಿಟಬಲ್ ಟ್ರಸ್ಟ್‌ಇತರರಿಗೆ ಮಾದರಿಯಾಗಿದ್ದು, ನಿಮ್ಮ ಎಲ್ಲಾ ಜನಮುಖಿ ಕಾರ್ಯಗಳಿಗೆ ನಾನು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ಟಿ.ಮರಿಯಪ್ಪ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಂಡಿದ್ದು, ಅವರೆಲ್ಲರೂ ತಾವು ಓದಿದ ಶಾಲೆಯ ಋಣ ತೀರಿಸಬೇಕೆಂದು ಕರೆ ನೀಡಿದರು.

ಈ ವೇಳೆ ಟ್ರಸ್ಟ್‌ವತಿಯಿಂದ ವಿಶೇಷ ಚೇತನರಿಗೆ ವೈದ್ಯಕೀಯ ಸಲಕರಣೆ ಮತ್ತು ಸಹಾಯದ ಪರಿಕರ ವಿತರಿಸಿ, ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್‌ಹಾಗೂ ಪಾಠೋಪಕರಣ ನೀಡಿ ವಿಕಲಚೇತನರಿಗೆ ಆಹಾರದ ಕಿಟ್ ನೀಡಲಾಯಿತು.

ಟ್ರಸ್ಟ್‌ ‌ನ ಸಂಘಟನಾ ಕಾರ್ಯದರ್ಶಿ ಎಡತೊರೆಕೆ ಲೋಕೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ನೊಂದವರು ಮತ್ತು ಸಂಕಷ್ಟಕ್ಕೀಡಾದವರ ಸೇವೆ ಮಾಡಲು ನಿರ್ಧಾರ ಮಾಡಿದ್ದು, ನಮ್ಮೊಂದಿಗೆ ಸಮಾಜದ ಸರ್ವರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಯುವರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋಕಿಲಾ, ಹಂಪಾಪುರ ಸುಭಾಷ್. ಎಂ. ರಾವ್ ಮೆಮೋರಿಯಲ್ ಟ್ರಸ್ಟ್‌ ‌ನ ಸ್ವರೂಪರಾಣಿ, ಮೈಸೂರಿನ ಶಕ್ತಿಧಾಮ ಟ್ರಸ್ಟ್‌ಪದಾಧಿಕಾರಿಗಳಾದ ಲಕ್ಷ್ಮೀ, ಉಷಾ ಮಾತನಾಡಿದರು.

ಟ್ರಸ್ಟ್‌‌ನ ಗೌರವಾಧ್ಯಕ್ಷ ಎಚ್. ಮಂಜುನಾಥ್, ಅಧ್ಯಕ್ಷ ಕೆ.ಎಸ್. ರಾಘವೇಂದ್ರ, ಉಪಾಧ್ಯಕ್ಷ ಕೆ.ಆರ್. ಯೋಗೇಶ್, ಎಸ್.ಆರ್. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎನ್. ಪ್ರಶಾಂತ್, ಕಾರ್ಯದರ್ಶಿ ಮಹಮದ್‌ ಮುಜಾಮಿಲ್, ಸಹ ಕಾರ್ಯದರ್ಶಿ ಜಿ.ಎಸ್. ಪ್ರಸನ್ನ, ಖಜಾಂಚಿ ಸಿ.ಜೆ. ಸುಧೀಶ್‌ಕುಮಾರ್, ಗೌರವ ಸಲಹೆಗಾರರಾದ ಪಿ. ಜಗದೀಶ್, ಕೃಷ್ಣ, ಕಾನೂನು ಸಲಹೆಗಾರರಾದ ಶಂಕರ್, ಸೋಮೇಶ್, ಜಿ. ನಿರಂಜನ್‌ಕುಮಾರ್, ಶಕೀಲ್‌ಅಹಮದ್, ಕ್ರೀಡಾ ಕಾರ್ಯದರ್ಶಿಗಳಾದ ಜಿ.ಎ. ಮುರಳಿ, ಪಿ. ನಟರಾಜ ಇದ್ದರು.