ಸಾರಾಂಶ
ಧರ್ಮಾಧಿಕಾರಿ ಡಾ. ಹೆಗ್ಗಡೆ ಅಧ್ಯಕ್ಷತೆ । ಸಾಮಾಜಿಕ, ಧಾರ್ಮಿಕ ಪ್ರಮುಖರು ಭಾಗಿ
ಕನ್ನಡಪ್ರಭ ವಾರ್ತೆ ಉಡುಪಿಮುಂದಿನ ಜನವರಿಯಲ್ಲಿ ನಡೆಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವವನ್ನು ಭಕ್ತರ ಉತ್ಸವವನ್ನಾಗಿ ಅಭೂತಪೂರ್ವವಾಗಿ ನಡೆಸುವುದಕ್ಕೆ ಅಗತ್ಯ ಮಾರ್ಗದರ್ಶನ, ಸಲಹೆ, ಸೂಚನೆ ಪಡೆಯುವುದಕ್ಕಾಗಿ ಗಣ್ಯರ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ನ.7ರಂದು ಸಂಜೆ 5 ಗಂಟೆಗೆ ನಗರದ ವಿದ್ಯೋದಯ ಪಿಯು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ಪಾಲ್ ಸುವರ್ಣ, ಮಂಗಳವಾರ ಶ್ರೀಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿಗಳನ್ನು ನೀಡಿದರು.ಈ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಂಸದರು, ಶಾಸಕರು, ಧಾರ್ಮಿಕ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ನ.14ರಂದು ಧಾನ್ಯ ಮುಹೂರ್ತ:
ಈಗಾಗಲೇ ಪರ್ಯಾಯೋತ್ಸವಕ್ಕೆ ಸಿದ್ಧತೆಯಾಗಿ, ಮುಂದಿನ 2 ವರ್ಷಗಳ ಅನ್ನಸಂತರ್ಪಣೆಗೆ ಪೂರಕವಾಗಿ ಸಂಪ್ರದಾಯದಂತೆ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮಹೂರ್ತಗಳು ನಡೆದಿದ್ದು, ನಾಲ್ಕನೇಯದಾಗಿ ಧಾನ್ಯ ಮುಹೂರ್ತವು ನ.14ರಂದು ನಡೆಯಲಿದೆ ಎಂದು ಶ್ರೀ ಮಠದ ದಿವಾನ ಉದಯಕುಮಾರ್ ಸರಳತ್ತಾಯರು ತಿಳಿಸಿದರು.ಜ.9ರಂದು ಶ್ರೀಗಳ ಪುರಪ್ರವೇಶ:ಪ್ರಸ್ತುತ ಪರ್ಯಾಯಪೂರ್ವ ದೇಶದ ಪುಣ್ಯ ಕ್ಷೇತ್ರಗಳ ಸಂದರ್ಶನದಲ್ಲಿ ನಿರತರಾಗಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಡಿ. 9ರಂದು ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಅವರನ್ನು ಕಡಿಯಾಳಿಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆ ತರಲಾಗುವುದು. ನಂತರ ಉಡುಪಿ ಜನರ ಪರವಾಗಿ ಪೌರ ಸನ್ಮಾನ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.ಜ.10ರಿಂದ ಹೊರೆ ಕಾಣಿಕೆ:
ಜ.18 ಮತ್ತು 19ರಂದು ನಡೆಯುವ ಪರ್ಯಾಯೋತ್ಸವದ ಅಂಗವಾಗಿ ಸುಮಾರ 3 ಲಕ್ಷ ಜನರಿಗೆ ಅನ್ನಸಂತರ್ಪಣೆಗಾಗಿ ಹಸಿರು ಹೊರೆಕಾಣಿಕೆ ಸಂಗ್ರಹ ಕಾರ್ಯವು ಜ.18ರಿಂದ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯನ್ನು 8 ವಲಯಗಳನ್ನು ಗುರುತಿಸಲಾಗಿದೆ. ಜ.17ರ ವರೆಗೆ ಹೊರೆಕಾಣಿಕೆ ಮೆರವಣಿಗೆಯಲ್ಲಿ ಬಂದ ತರಕಾರಿ, ಧಾನ್ಯ ಇತ್ಯಾದಿಗಳು ರಾಜಾಂಗಣದ ಬಳಿ ಪಾರ್ಕಿಂಗ್ ಏರಿಯಾದಲ್ಲಿ ಸಂಗ್ರಹಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಟ್ಟಾರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೊರೆಕಾಣಿಕೆ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಪ್ರಮುಖರಾದ ಮೋಹನ್ ಭಟ್ ಮತ್ತು ಕಿರಣ್ ಕುಮಾರ್ ಬೈಲೂರು ಉಪಸ್ಥಿತರಿದ್ದರು.ಈ ಬಾರಿ 10 ದಿನಗಳ ದರ್ಬಾರುಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥರು ತಮ್ಮ ಪರ್ಯಾಯೋತ್ಸವವನ್ನು ಪ್ರತಿಭಾರಿ ವಿಭಿನ್ನವಾಗಿ ನಡೆಸುತ್ತಿದ್ದರು. ಅವರ ಆಶಯದಂತೆಯೇ ಈ ಬಾರಿಯ ಪರ್ಯಾಯವೂ ವೈವಿಧ್ಯಮಯವಾಗಲಿದೆ. ಜ.18ರಿಂದ 29ರ ವರೆಗೆ 10 ದಿನಗಳ ಪರ್ಯಾಯ ದರ್ಬಾರ್ ನಡೆಯಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಅನೇಕ ಮಂತ್ರಿಗಳು ಭಾಗವಹಿಸಲಿದ್ದಾರೆ. ದೇಶವಿದೇಶಗಳ ಕಲಾತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))