ಪ್ರಥಮ ಬಾರಿಗೆ ಉಡುಪಿ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಪಟ್ಟದ ದೇವರ ಸಹಿತವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಗುರುವಂದನಾ ತುಲಾಭಾರ ಸೋಮವಾರ ನೆರವೇರಿತು.

ಮಂಗಳೂರು: ಪ್ರಥಮ ಬಾರಿಗೆ ಉಡುಪಿ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಪಟ್ಟದ ದೇವರ ಸಹಿತವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಗುರುವಂದನಾ ತುಲಾಭಾರ ಸೋಮವಾರ ನೆರವೇರಿತು.

ವೇದ ವಿದ್ವಾಂಸರು, ಜನಪ್ರತಿನಿಧಿಗಳು, ಧಾರ್ಮಿಕ- ಸಾಮಾಜಿಕ ಮುಖಂಡರು, ಗಣ್ಯರ ಸಮ್ಮುಖದಲ್ಲಿ ನಾಣ್ಯಗಳಿಂದ ಗುರುವಂದನಾ ತುಲಾಭಾರ ನಡೆಸಲಾಯಿತು.ಗುರುವಂದನೆ ಸ್ವೀರಿಸಿದ ಬಳಿಕ ಆಶೀರ್ವಚನ ನೀಡಿದ ಶ್ರೀ ವೇದವರ್ಧನ ಸ್ವಾಮೀಜಿ, ಇದು ಭಕ್ತರ ಪರ್ಯಾಯ ಎನ್ನುವ ನೆಲೆಯಲ್ಲಿ ಎಲ್ಲರೂ ಪರ್ಯಾಯದಲ್ಲಿ ಭಾಗವಹಿಸಬೇಕು. ಆ ಮೂಲಕ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬೇಕು. ಈ ಬಾರಿಯ ಪರ್ಯಾಯ ಭಕ್ತರನ್ನೇ ಮೂಲವಾಗಿಟ್ಟುಕೊಂಡು ನಡೆಯಲಿದೆ ಎಂದು ನುಡಿದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ತುಲಾಭಾರ ಸೇವೆ ಎನ್ನುವುದು ಎಲ್ಲರೂ ಒಟ್ಟಾಗಿ ಶ್ರೀಗಳನ್ನು ಮತ್ತು ಪಟ್ಟದ ದೇವರನ್ನು ಆರಾಧಿಸುವುದಾಗಿದೆ. ಉಡುಪಿ ಪರ್ಯಾಯದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಶೀರೂರು ಪರ್ಯಾಯವನ್ನು ಯಶಸ್ವಿಗೊಳಿಸಬೇಕಿದೆ ಎಂದರು.ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿರೂರು ಮಠದ ದಿವಾನ ಉದಯ ಕುಮಾರ್‌ ಸರಳತ್ತಾಯ, ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌, ಪ್ರಮುಖರಾದ ಡಾ.ಎಂ.ಬಿ. ಪುರಾಣಿಕ್‌, ಡಾ.ಹರಿಕೃಷ್ಣ ಪುನರೂರು, ಎ.ಸಿ. ಭಂಡಾರಿ, ಸತ್ಯಕೃಷ್ಣ ಭಟ್‌, ಶಕೀಲ ಕಾವ, ಕದ್ರಿ ಮನೋಹರ ಶೆಟ್ಟಿ, ಭುವನಾಭಿರಾಮ ಉಡುಪ, ಕದ್ರಿ ನವನೀತ ಶೆಟ್ಟಿ, ವಕೀಲ ರಾಘವೇಂದ್ರ ಎಚ್‌.ವಿ., ಸುಧಾಕರ ರಾವ್‌ ಪೇಜಾವರ, ಜನಾರ್ದನ ಹಂದೆ, ಕದ್ರಿ ಪ್ರಭಾಕರ ಅಡಿಗ, ವಿಜಯಲಕ್ಷ್ಮಿ ಶೆಟ್ಟಿ, ಸೀತಾರಾಮ ಆಚಾರ್ಯ, ಸುಬ್ರಹ್ಮಣ್ಯ ರಾವ್‌, ಪ್ರಭಾಕರ ರಾವ್‌, ಗುರುಚರಣ್‌ ಮತ್ತಿತರರು ಇದ್ದರು