ಪ್ರತಿ ಪರ್ಯಾಯೋತ್ಸವ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ ಏಳು ಮಠಗಳಿಗೆ ಒಲಿಪೆ ನೀಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಲಿಪೆ‌ ಅಂದರೆ ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಸಹಕಾರವಾಗುವಂತೆ, ಭಾವಿ ಪರ್ಯಾಯ ಮಠದಿಂದ ನೀಡುವ ವಸ್ತು ರೂಪದ‌ ಕಾಣಿಕೆ.

ಉಡುಪಿ: ಪ್ರತಿ ಪರ್ಯಾಯೋತ್ಸವ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ ಏಳು ಮಠಗಳಿಗೆ ಒಲಿಪೆ ನೀಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಲಿಪೆ‌ ಅಂದರೆ ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಸಹಕಾರವಾಗುವಂತೆ, ಭಾವಿ ಪರ್ಯಾಯ ಮಠದಿಂದ ನೀಡುವ ವಸ್ತು ರೂಪದ‌ ಕಾಣಿಕೆ.ನಾಡಿನ‌ ಬೇರೆ ಬೇರೆ ಭಾಗದಿಂದ ಬರುವ ಭಕ್ತರು ಅಷ್ಟಮಠಗಳಲ್ಲಿ ತಂಗುತ್ತಾರೆ. ಭಾವಿ ಪರ್ಯಾಯ ಮಠವು ತನ್ನ ಪರ್ಯಾಯೋತ್ಸವಕ್ಕೆ ಬಂದ ಭಕ್ತರಿಗೆ ಊಟೋಪಚಾರ, ಔಷದೋಪಾತರಕ್ಕೆ ಸಹಾಯ ವಾಗುವಂತೆ ಇತರ ಮಠಗಳಿಗೆ ಅತ್ಯಗತ್ಯ ದಿನಬಳಕೆಗೆ ಬೇಕಾದ ಎಲ್ಲಾ‌ ವಸ್ತುಗಳನ್ನು ಒಲಿಪೆ ಎಂದು ನೀಡಲಾಗುತ್ತದೆ. ಸಂಪ್ರದಾಯದಂತೆ ಒಂದು ಬುಟ್ಟಿಯಲ್ಲಿ ಆಯಾ ಮಠಗಳ ಪಟ್ಟದ ದೇವರ ಪೂಜೆಗೆ ಜೋಡು ತೆಂಗಿನಕಾಯಿ, ಸಿಂಗಾರ, ಗಂಧದ ಕೊರಡು ಮತ್ತು ಹೂಮಾಲೆ, ಮತ್ತೊಂದು ಬುಟ್ಟಿಯಲ್ಲಿ ಪ್ರತಿ ಮಠದ ಪಾರುಪತ್ಯಗಾರರಿಗೆ ನೀಡುವ ವಸ್ತುಗಳು, ಉಳಿದಂತೆ ಬೇರೆ ಬೇರೆ ಬುಟ್ಟಿಗಳಲ್ಲಿ ಅಕ್ಕಿ, ಬೇಳೆ, ತರಕಾರಿ, ಬಾಳೆ‌ಎಲೆ, ಸೀಯಾಳ, ಹಗ್ಗ, ಔಷದೀಯ ವಸ್ತುಗಳು, ಹೀಗೆ ದಿನ ಬಳಕೆಯ ಅಗತ್ಯದ ವಸ್ತುಗಳನ್ನು ನೀಡಲಾಗುತ್ತದೆ.

ಈ ಒಲಿಪೆ ನೀಡುವುದಕ್ಕೆ ಕೈಯಿಂದಲೇ ತಯಾರಿಸಿದ ನಾರಿನ ಬುಟ್ಟಿಗಳನ್ನೇ ಬಳಸಲಾಗುತ್ತದೆ, ಇದರಿಂದ ಒಂದೆಡೆ ಸಂಪ್ರದಾಯ ಪಾಲನೆಯಾದರೆ ಇನ್ನೊಂದೆಡೆ ಇಂದಿಗೂ ನಾರಿನ ಬುಟ್ಟಿಗಳನ್ನು ತಯಾರಿಸುವವರಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ.