ಶೀರೂರು ಮಠದ ಪರ್ಯಾಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್, ತಾಂಬೂಲಮ್ ಮತ್ತು ಕಲ್ಯಾಣ್ ಜ್ಯುವೆಲರ್ಸ್ ಸಹಭಾಗಿತ್ವದಲ್ಲಿ ಇಲ್ಲಿನ ಕೋಸ್ಟಲ್ ಸ್ಟಾರ್ಸ್ ವೇದಿಕೆ ವತಿಯಿಂದ ‘ಸಂಗೀತ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಡುಪಿ: ಶೀರೂರು ಮಠದ ಪರ್ಯಾಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್, ತಾಂಬೂಲಮ್ ಮತ್ತು ಕಲ್ಯಾಣ್ ಜ್ಯುವೆಲರ್ಸ್ ಸಹಭಾಗಿತ್ವದಲ್ಲಿ ಇಲ್ಲಿನ ಕೋಸ್ಟಲ್ ಸ್ಟಾರ್ಸ್ ವೇದಿಕೆ ವತಿಯಿಂದ ‘ಸಂಗೀತ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮಶೆಟ್ಟಿ, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ರಮೇಶ್ ವೈದ್ಯ ಹಾಗೂ ವೆಂಕಿಸ್ ಸ್ಟೇ ಇನ್ ನ ಮಾಲಕ ಚೇತನ್ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಘಟನಾ ಸಮಿತಿ ಸದಸ್ಯರಾದ ಸತೀಶ್ಚಂದ್ರ ಹಾಗೂ ಶೃತಿ ಜಿ.ಶೆಣೈ ಉಪಸ್ಥಿತರಿದ್ದರು.ಈ ವೈಭವದ ಕಾರ್ಯಕ್ರಮದಲ್ಲಿ ಸತತ 8 ಘಂಟೆಗಳ ನಿರಂತರ ಸಂಗೀತ ಮತ್ತು ನೃತ್ಯಗಳನ್ನು ಪ್ರಕಾಶ್ ಕಾಮತ್, ವೆಂಕಟೇಶ್ ಕಾಮತ್ ಹಾಗೂ ವಂದಿತಾ ಕಾಮತ್ ನಿರ್ವಹಿಸಿದರು.
ಸಂಗೀತ ದಿಗ್ಗಜರಾದ ಮಾಲಿನಿ ಕೇಶವ ಪ್ರಸಾದ್, ರಮೇಶ್ಚಂದ್ರ, ರವೀಂದ್ರ ಪ್ರಭು ಮತ್ತು ರೇಷ್ಮಾ ಮಂಜುನಾಥ್ ಅವರ ಹಾಡುಗಳು ವೇದಿಕೆಯ ಮೆರುಗನ್ನು ಇನ್ನಷ್ಟು ಏರಿಸಿದರು. ಜ್ಯೂನಿಯರ್ ಗುರುಕಿರಣ್ ಹಾಗೂ ಜ್ಯುನಿಯರ್ ವಿಷ್ಣುವರ್ಧನ್ ಅಭಿನಯಗಳು ಜನಸೂರೆಗೊಂಡವು. ಹಾಡಿಗೆ ಸಂಗೀತಾಭಿಮಾನಿಗಳು ಕುಣಿದು ಕುಪ್ಪಳಿಸಿದರು