ವಚನಕಾರರ ವಿಚಾರಧಾರೆಗಳ ಮುಂದಿನ ಪೀಳಿಗೆಗೂ ತಲುಪಿಸಿ-ಅಕ್ಷತಾ

| Published : Jan 22 2025, 12:30 AM IST

ವಚನಕಾರರ ವಿಚಾರಧಾರೆಗಳ ಮುಂದಿನ ಪೀಳಿಗೆಗೂ ತಲುಪಿಸಿ-ಅಕ್ಷತಾ
Share this Article
  • FB
  • TW
  • Linkdin
  • Email

ಸಾರಾಂಶ

ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದು ಗ್ರೇಡ್‌-2 ತಹಸೀಲ್ದಾರ್‌ ಜಿ.ಎಂ. ಅಕ್ಷತಾ ಹೇಳಿದರು.

ಬ್ಯಾಡಗಿ:ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದು ಗ್ರೇಡ್‌-2 ತಹಸೀಲ್ದಾರ್‌ ಜಿ.ಎಂ. ಅಕ್ಷತಾ ಹೇಳಿದರು.

ತಾಲೂಕು ಆಡಳಿತ ಸೌಧದ ತಹಸೀಲ್ದಾರ್‌ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ, ವೇಮನ ಜಯಂತಿ ಹಾಗೂ ಶಿದ್ದರಾಮೇಶ್ವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ, ಪೂಜೆ ಸಲ್ಲಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯ ನಿಷ್ಠುರವಾದಿ ವಚನಕಾರರಾಗಿದ್ದು, 12ನೇ ಶತಮಾನದ ಅನುಭವ ಮಂಟಪದಲ್ಲಿ ಮೊದಲ ಪಂಕ್ತಿಯಲ್ಲಿ ಇದ್ದವರು, ಇವರ ಅಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು.

ಉಪನ್ಯಾಸ ನೀಡಿದ ಕೆ.ಟಿ. ಕಮ್ಮಾರ ಮಾತನಾಡಿ, ಎಲ್ಲ ವಚನಕಾರರನ್ನು ಗಮನಿಸುತ್ತಾ ಬಂದರೆ ಅಂಬಿಗರ ಚೌಡಯ್ಯ ಅವರ ನಡೆ, ನುಡಿ ವಿಶಿಷ್ಟವಾಗಿರುವುದನ್ನು ಕಾಣಬಹುದು. ಯಾವುದೇ ಒಂದು ವಿಷಯವನ್ನು ನಿಷ್ಠುರವಾಗಿ ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಅವರು ಹೇಳುತ್ತಿದ್ದರು. ಇರುವುದನ್ನು ಇದ್ದ ಹಾಗೆ ಹೇಳುವ ವಿಶೇಷ ವ್ಯಕ್ತಿತ್ವ ಚೌಡಯ್ಯರವರದ್ದಾಗಿತ್ತು. ಪ್ರತಿಯೊಬ್ಬ ವಚನಕಾರರು ತಮ್ಮ ವಚನದ ಕೊನೆಯ ಸಾಲಿನಲ್ಲಿ ಅವರ ಆರಾಧ್ಯ ದೈವದ ನಾಮವನ್ನು ಬಳಸುತ್ತಿದ್ದರು, ಆದರೆ ಇವರು ತಾವು ಮಾಡಿದ ವೃತ್ತಿಯನ್ನು ಅಂಕಿತ ನಾಮವನ್ನಾಗಿ ಬಳಸುತ್ತಿದ್ದರು ಎಂದರು.

ಸಿದ್ದರಾಮೇಶ್ವರರು ಭಕ್ತಿ ಮತ್ತು ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು. ಅವರು ರಚಿಸಿದ ವಚನಗಳು ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ಅವುಗಳ ಆಳ, ಅಗಲ ತಿಳಿದಾಗ ಮಾತ್ರ ಮಹನೀಯರ ಚಿಂತನೆಗಳನ್ನು ಅರ್ಥೈಸಿಕೊಳ್ಳಬಹುದು ಎಂದರು.ಜನ ಸಾಮಾನ್ಯರಂತೆ ಬಾಳಿದ, ನೈಜ ಜನಪರ ಮತ್ತು ಶ್ರೇಷ್ಠ ವ್ಯಕ್ತಿ ವೇಮನರು, ತಮ್ಮ ಕಾವ್ಯದ ಮೂಲಕ ಜಾತೀಯತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಪ್ರಯತ್ನಿಸಿದ ಅಪರೂಪದ ಸಮಾಜ ಸುಧಾರಕರಾಗಿದ್ದರು ಎಂದರು.

ಈ ಸಂದರ್ಭದಲ್ಲಿ ರಮೇಶ ಸುತ್ತಕೋಟಿ, ಜಿತೇಂದ್ರ ಸುಣಗಾರ, ತಿಮ್ಮಣ್ಣ ವಡ್ಡರ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಯಣ್ಣ ಮಲ್ಲಿಗಾರ, ನಿಂಗಪ್ಪ ಹೆಗ್ಗಣ್ಣನವರ, ಜಯಪ್ಪ ಭೋವಿ, ಚಂದ್ರಪ್ಪ ದೊಡ್ಮನಿ, ಜಗದೀಶಪ್ಪ ಕಣಗಲಭಾವಿ, ಚಂದ್ರು ಮುಳಗುಂದ, ವೀರಭದ್ರಪ್ಪ ಗೊಡಚಿ, ಹೊನ್ನಪ್ಪ ಸಣ್ಣಬಾರ್ಕಿ, ಶಿವನಗೌಡ ಬಸನಗೌಡ್ರ, ಈಶ್ವರಪ್ಪ ಕುಡಪಲಿ, ಮಂಜುಳಾ ನಾಯಕ, ನಾಗರತ್ನ ಕಾಳೆ ಸೇರಿದಂತೆ ಇತರರಿದ್ದರು.