ಅರೆಸೇನಾ ಪಡೆಯಿಂದ ಪಥ ಸಂಚಲನ

| Published : May 01 2024, 01:17 AM IST

ಸಾರಾಂಶ

ಬಾಗಲಕೋಟೆ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಪ್ಯಾರಾ ಮಿಲಿಟರಿ ಪಡೆ ಮತ್ತು ಪೊಲೀಸ್ ಪಡೆಯಿಂದ ಚುನಾವಣೆ ಮುಂಜಾಗ್ರತ ಕ್ರಮವಾಗಿ ನಗರದ ವಿವಿಧ ಕಡೆಗಳಲ್ಲಿ ಮಂಗಳವಾರ ಪಥ ಸಂಚಲನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಪ್ಯಾರಾ ಮಿಲಿಟರಿ ಪಡೆ ಮತ್ತು ಪೊಲೀಸ್ ಪಡೆಯಿಂದ ಚುನಾವಣೆ ಮುಂಜಾಗ್ರತ ಕ್ರಮವಾಗಿ ನಗರದ ವಿವಿಧ ಕಡೆಗಳಲ್ಲಿ ಮಂಗಳವಾರ ಪಥ ಸಂಚಲನ ನಡೆಸಲಾಯಿತು.

ಬಾಗಲಕೋಟೆ ಹಳೆ ನಗರದ ವಲ್ಲಭಭಾಯಿ ಚೌಕ್‌ದಿಂದ ಪಥ ಸಂಚಲನ ಹೊರಟು ಹಳೆಯ ಅಂಚೆ ಕಚೇರಿ, ಕೊತ್ಲೇಶ್ವರ ದೇವಸ್ಥಾನ, ಪಂಕಾ ಮಸೀದಿ, ಟೆಂಗಿನಮಠ ಸೇರಿದಂತೆ ನಾನಾ ಕಡೆಗಳಲ್ಲಿ ಸಂಚರಿಸಿತು. ಪಥ ಸಂಚಲನದಲ್ಲಿ ಕಮಾಂಡೋ ಹಾಗೂ ಪೊಲೀಸ್ ಪಡೆ ಸೇರಿ 100ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ನಡೆದ ಪಥಸಂಚಲನದಲ್ಲಿ ಸಿಪಿಐ ಗುರುನಾಥ ಚವ್ಹಾಣ, ಪಿಎಸ್ಐಗಳಾದ ವಿನೋದ ಹೊಸಮನಿ, ಕಿರಣ ಮೋರೆ, ಮೈಕೋಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.