ಮಂಡ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥಸಂಚಲನ

| Published : Oct 14 2024, 01:22 AM IST

ಮಂಡ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರದ ಬಾಲಭವನದ ಬಳಿ ಜಮಾಯಿಸಿದ ಗಣವೇಷಧಾರಿ ಸ್ವಯಂಸೇವಕರು, ನಗರದ ಕೆ.ಆರ್. ರಸ್ತೆ, ವಿದ್ಯಾಗಣಪತಿ ದೇವಾಲಯ, ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ ಬಳಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ವಿವೇಕಾನಂದ ಜೋಡಿ ರಸ್ತೆ ಮಾರ್ಗವಾಗಿ ಮತ್ತೆ ಬಾಲಭವನ ಬಳಿಗೆ ಧಾವಿಸಿ ಸಂಪನ್ನವಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಗರದಲ್ಲಿ ಪಥ ಸಂಚಲನ ನಡೆಯಿತು. ನಗರದ ಬಾಲಭವನದ ಬಳಿ ಜಮಾಯಿಸಿದ ಗಣವೇಷಧಾರಿ ಸ್ವಯಂಸೇವಕರು, ನಗರದ ಕೆ.ಆರ್. ರಸ್ತೆ, ವಿದ್ಯಾಗಣಪತಿ ದೇವಾಲಯ, ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ ಬಳಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ವಿವೇಕಾನಂದ ಜೋಡಿ ರಸ್ತೆ ಮಾರ್ಗವಾಗಿ ಮತ್ತೆ ಬಾಲಭವನ ಬಳಿಗೆ ಧಾವಿಸಿ ಸಂಪನ್ನವಾಯಿತು. ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ೯೯ ವರ್ಷ ಪೂರೈಸಿ ೧೦೦ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಹಾಗೂ ವಿಜಯದಶಮಿ ಅಂಗವಾಗಿ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣವೇಷಧಾರಿ ಸ್ವಯಂಸೇವಕರು ಪಥ ಸಂಚಲನ ನಡೆಸುತ್ತಿದ್ದ ಮಾರ್ಗದಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಮನೆಗಳ ನಿವಾಸಿಗಳು ಪುಷ್ಪವೃಷ್ಟಿಗರೆದು ಸ್ವಾಗತಿಸಿದರು.ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಬನ್ನಿಪೂಜೆ

ಕಿಕ್ಕೇರಿ:

ಸಮೀಪದ ಪುರಗೇಟ್‌ನಲ್ಲಿರುವ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿವೃಕ್ಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.

ಅರ್ಚಕ ಬಸಪ್ಪ ಗುರೂಜಿ ನೇತೃತ್ವದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪಾದಪೂಜೆ ಮತ್ತಿತರ ಪೂಜಾ ಕೈಂಕರ್ಯ ಜರುಗಿದವು. ಗುಡಿಯಿಂದ ಸಮೀಪದ ಬನ್ನಿವೃಕ್ಷದವರಿಗೆ ಭಕ್ತರು ಶ್ರದ್ಧಾಭಕ್ತಿಯಿಂದ ಸಾಗಿದರು. ಬನ್ನಿ ವೃಕ್ಷದ ಬಳಿ ಪೂರ್ಣಕುಂಭ ಕಳಶವಿಟ್ಟು ದೇವಿ ಅವಾಹನೆ ಮಾಡಲಾಯಿತು.

ಬನ್ನಿವೃಕ್ಷಕ್ಕೆ ವಿವಿಧ ವಸ್ತ್ರ, ಪುಷ್ಪಗಳಿಂದ ಅಲಂಕರಿಸಿ ಪೂಜಿಸಿ ಬನ್ನಿ ರೆಂಬೆ ಛೇದಿಸಲಾಯಿತು. ಭಕ್ತರಿಗೆ ಪ್ರಸಾದವಾಗಿ ಬನ್ನಿ ಎಲೆ ವಿತರಿಸಲಾಯಿತು. ಸಾಮೂಹಿಕ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.