ತಾಳ್ಮೆಯಿಂದ ಪರಿಪಕ್ವ ಕಲಾಕೃತಿ ರಚನೆ ಸಾಧ್ಯ: ಗಣೇಶ ಸೋಮಯಾಜಿ

| Published : Nov 18 2024, 12:03 AM IST

ತಾಳ್ಮೆಯಿಂದ ಪರಿಪಕ್ವ ಕಲಾಕೃತಿ ರಚನೆ ಸಾಧ್ಯ: ಗಣೇಶ ಸೋಮಯಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ, ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರ ಕಲಾಕೃತಿಗಳ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ತಾಳ್ಮೆಯೊಂದಿಗೆ ಕಲೆಯಲ್ಲಿ ನಿರತರಾದಾಗ ಪರಿಪಕ್ವತೆಯುಳ್ಳಂತಹ ಕಲಾಕೃತಿಯನ್ನು ರಚಿಸಲು ಸಾಧ್ಯ ಎಂದು ಮಂಗಳೂರಿನ ಹಿರಿಯ ಕಲಾವಿದ ಗಣೇಶ ಸೋಮಾಯಾಜಿ ಹೇಳಿದರು.ಅವರು ಶನಿವಾರ ಇಲ್ಲಿನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ, ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರ ಕಲಾಕೃತಿಗಳ ಪ್ರದರ್ಶನ ‘ಪರಂಪರಾ’ವನ್ನು ಉದ್ಘಾಟಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮಾಹೆಯ ನಿವೃತ್ತ ಉಪನ್ಯಾಸಕ ಕೆ.ಎಸ್. ಶೇರಿಗಾರ್, ಮಣಿಪಾಲ ಸ್ಕೂಲ್ ಆಫ್ ಅರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ನ ಪ್ರಾಧ್ಯಾಪಕಿ ಡಾ. ದೀಪಿಕಾ ಶೆಟ್ಟಿ, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಅವರು ಮುಖ್ಯ ಅತಿಥಿಗಲಾಗಿ ಆಗಮಿಸಿ, ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ಉಪಸ್ಥಿತರಿದ್ದರು.ಕಲಾ ವಿದ್ಯಾರ್ಥಿಗಳಾದ ಪ್ರಜ್ಞಾ ಭಟ್ ಪ್ರಾರ್ಥಿಸಿದರು. ಡಾ. ಜಿ.ಎಸ್.ಕೆ. ಭಟ್ ಸ್ವಾಗತಿಸಿದರು. ಉಜ್ವಲ್ ವಂದಿಸಿದರು. ಸುಲಕ್ಷಣ ರಮೇಶ್ ಕಾರ್ಯಕ್ರಮ ನಿರೂಪಿಸಿದರು.ತ್ರಿವರ್ಣ ಆರ್ಟ್ ಗ್ಯಾಲರಿಯ 23 ವಿದ್ಯಾರ್ಥಿಗಳು ಚಾರ್ಕೊಲ್ ಮಿಶ್ರ ಮಾಧ್ಯಮದಲ್ಲಿ ರಚಿಸಲಾಗಿರುವ 27 ಕಲಾಕೃತಿಗಳ ಈ ಪ್ರದರ್ಶನ ‘ಪರಂಪರಾ’ ಸಾರ್ವಜನಿಕರ ವೀಕ್ಷಣೆಗೆ ನ.18ರ ವರೆಗೆ ಬೆಳಗ್ಗೆ 10ರಿಂದ ಸಂಜೆ 7.30ರ ತನಕ ಮುಕ್ತವಾಗಿ ತೆರೆದಿರುತ್ತದೆ.