ಸಾರಾಂಶ
- ಲಿಂಗಾಪುರದಲ್ಲಿ ಯುವ ಮುಖಂಡ ಸೋಮಶೇಖರ್ ನಿವಾಸದಲ್ಲಿ ಸನ್ಮಾನ ಸ್ವೀಕಾರ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವೈದ್ಯರಿಗೆ ರೋಗಿಗಳೇ ದೇವರಾಗಿದ್ದು, ಅಂಥವರ ನೋವು (ಕಾಯಿಲೆ) ನಿವಾರಿಸುವ ಅವಕಾಶ ಎಂಬ ದೊಡ್ಡ ಉಡುಗೊರೆ ದೇವರು ವೈದ್ಯರಿಗೆ ನೀಡಿದ್ದಾರೆ ಎಂದು ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ.ಚಂದ್ರಪ್ಪ ಹೇಳಿದರು.ತಾಲೂಕಿನ ಲಿಂಗಾಪುರ ಗ್ರಾಮದ ಯುವ ಮುಖಂಡ ಸೋಮಶೇಖರ್ ಮಂಗಳವಾರ ತಮ್ಮ ನಿವಾಸದಲ್ಲಿ ವೈದ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿ, ದಿನನಿತ್ಯ ಎಲ್ಲ ಕೆಲಸಗಳನ್ನು ಮಧ್ಯಮ ಮಟ್ಟದಲ್ಲಿ ಮಾಡುತ್ತೇವೆ. ನಮ್ಮ ತೃಪ್ತಿಗಾಗಿ ಮಾತ್ರ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಆದರೆ ಸರ್ಕಾರಿ ವೈದ್ಯಕೀಯ ವೃತ್ತಿ ಆಗಲ್ಲ. 23 ವರ್ಷಗಳ ಅನುಭವದಲ್ಲಿ ಗ್ರಾಮೀಣ ರೋಗಿಗಳ ಸೇವೆ ಮಾಡಿದ ಸಂತೃಪ್ತಿ ನನಗಿದೆ. ಈ ಪ್ರಶಸ್ತಿ ಪುರಸ್ಕಾರಕ್ಕೆ ಮೂಲಕಾರಣ ಗ್ರಾಮೀಣ ಜನರಾದ ನೀವು, ನಿಮ್ಮ ಸಹಕಾರ ಎಂದರು.
ಗ್ರಾಮದ ಯುವ ಮುಖಂಡ ಸೋಮಶೇಖರ ಮಾತನಾಡಿ. ಸಾಸ್ವೇಹಳ್ಳಿ ಹೋಬಳಿಯ 36 ಹಳ್ಳಿಗಳ ಬಡರೋಗಿಗಳ ಪಾಲಿಗೆ ಈ ವೈದ್ಯರೇ ದೇವರಾಗಿದ್ದಾರೆ. ತಮ್ಮ ಸುದೀರ್ಘ ಸೇವೆಯನ್ನು ಗ್ರಾಮೀಣ ರೋಗಿಗಳಿಗೇ ಮೀಸಲಿಟ್ಟು ಸೇವೆ ಸಲ್ಲಿಸಿದ್ದಾರೆ. ಜನರ ಹೃದಯವನ್ನು ಗೆದ್ದ ಹೃದಯವಂತರಾಗಿದ್ದಾರೆ ಎಂದರು.ಪ್ರಸ್ತುತ ಸಾಸ್ವೇಹಳ್ಳಿ ಹೋಬಳಿ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆಗಳ ಕೈಗೊಂಡು, ರಾಷ್ಟ್ರಮಟ್ಟದ ಉನ್ನತ ಪ್ರಶಸ್ತಿಗಳು ಲಭಿಸುವಂತಾಗಲಿ ಎಂದು ಗ್ರಾಮಸ್ಥರ ಪರವಾಗಿ ಶುಭ ಹಾರೈಸಿದರು.
ಗ್ರಾಮದ ಮುಖಂಡರಾದ ಪಟೇಲ್ ಮಂಜುನಾಥ್, ಬಸವರಾಜಪ್ಪ ಗೌಡ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಧನರಾಜಪ್ಪ ಉಪಸ್ಥಿತರಿದ್ದರು.- - - -9ಎಚ್.ಎಲ್.ಐ2:
ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ಮುಖಂಡ ಸೋಮಶೇಖರ್ ಅವರು ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ. ಜಿ.ಬಿ. ಚಂದ್ರಪ್ಪ ಅವರನ್ನು ಸನ್ಮಾನಿಸಿದರು.