ಗಣರಾಜ್ಯೋತ್ಸವದಿಂದ ದೇಶಭಕ್ತಿ ಗಟ್ಟಿ

| Published : Jan 27 2025, 12:48 AM IST

ಸಾರಾಂಶ

ಗಣರಾಜ್ಯೋತ್ಸವ ದೇ ಭಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಧ್ವಜಾರೋಹಣ ನೆರವೇರಿಸಿದ ಸಿವಿಲ್, ಜೆಎಂಎಫ್‌ಸಿ ನ್ಯಾಯಾಧೀಶ ಮಹಾಂತೇಶ ಚೌಗಳಿಕನ್ನಡಪ್ರಭ ವಾರ್ತೆ ಕುಕನೂರು

ಗಣರಾಜ್ಯೋತ್ಸವ ದೇಶಭಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಮಹಾಂತೇಶ ಚೌಗಳಿ ಹೇಳಿದರು.

ಪಟ್ಟಣದಲ್ಲಿರುವ ತಾಲೂಕಿನ ನೂತನ ಸಂಚಾರಿ ನ್ಯಾಯಾಲಯದಲ್ಲಿ ಪ್ರಥಮ ಬಾರಿಗೆ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿಸಲ ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ನಮ್ಮಲ್ಲಿ ದೇಶಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ದಿನ ಗಣರಾಜ್ಯೋತ್ಸವ ಆಗಿದೆ. ಇಡೀ ರಾಷ್ಟ್ರದಲ್ಲಿ ಗಣರಾಜ್ಯೋತ್ಸವ ಸಂಭ್ರಮ ತುಂಬುವಂತೆ ಮಾಡುತ್ತದೆ. ಪ್ರತಿವರ್ಷ ಜ. 26ರಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಅಂಗೀಕಾರಗೊಂಡ ದಿನವಿದು. ಜ.26, 1950ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು. ಈ ಮೂಲಕ ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಲಾಯಿತು. ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಬಳಿಕ ಇಡೀ ರಾಷ್ಟ್ರ ಖುಷಿಯಿಂದ ಕಳೆಯುವಂತೆ ಮಾಡಿದ ಮತ್ತೊಂದು ಕ್ಷಣ ಎಂದರೆ ಅದು ಗಣರಾಜ್ಯೋತ್ಸವದ ದಿನ. ಇದೇ ಕಾರಣದಿಂದ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.

ಸರ್ಕಾರಿ ಅಭಿಯಾಜಕ ರವಿಕುಮಾರ ಹುಣಸಿಮರದ, ವಕೀಲರಾದ ಐ.ಬಿ. ಕೊಳೂರು, ಬಸವರಾಜ ಜಂಗಲಿ, ಎಸ್.ಎಸ್. ಮಾದಿನೂರು, ಪಿ.ಆರ್. ಹಿರೇಮಠ, ಎಸ್.ಸಿ. ಗದಗ, ಅಡಿವೆಪ್ಪ ಬಿ. ಬೊರಣ್ಣವರ್, ರಮೇಶ ಗಜಕೋಶ, ಜಿ.ಕೆ. ಲಾಲಗೊಂಡರ್, ರಫಿ ಬಳಗೇರಿ, ರೇಣುಕರಾಜ, ಉಮಾ ಹಿರೇಮಠ, ವಿಜಯಲಕ್ಷ್ಮಿ, ರತ್ನಾ ಕೆಂಭಾವಿಮಠ, ನಿರ್ಮಲಾ ಇತರರಿದ್ದರು.