ಮಧುರನಹಳ್ಳಿಯಲ್ಲಿ ಪೌತಿ ಖಾತಾ ಆಂದೋಲನ

| Published : Sep 06 2025, 01:00 AM IST

ಮಧುರನಹಳ್ಳಿಯಲ್ಲಿ ಪೌತಿ ಖಾತಾ ಆಂದೋಲನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಾಥಪುರ ಹೋಬಳಿಯ ಮಧುರನಹಳ್ಳಿ ಗ್ರಾಮದಲ್ಲಿ ನಡೆದ ಪೌತಿಖಾತೆ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಸೌಮ್ಯ ಅವರು, ಇದುವರೆಗೆ ಪೌತಿ ಖಾತೆ ಆಗದಿರುವ ರೈತರು ಅಗತ್ಯ ದಾಖಲಾತಿಗಳಾದ ವಂಶವೃಕ್ಷ ಆಧಾರ್ ಕಾರ್ಡ್, ಪಹಣಿ, ಮರಣ ದೃಢೀಕರಣ ಪತ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕೇಳುವ ದಾಖಲಾತಿಗಳನ್ನು ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಿದರು.

ರಾಮನಾಥಪುರ: ಅರಕಲಗೂಡು ತಾಲೂಕಿನ ಎಲ್ಲಾ ಹೋಬಳಿಯಲ್ಲಿ ಉಪ ವಿಭಾಗಾಧಿಕಾರಿಗಳು ಸಕಲೇಶಪುರ ಉಪ ವಿಭಾಗ ಸಕಲೇಶಪುರವರ ಸೂಚನೆಯಂತೆ ಪೌತಿ ಖಾತಾ ಆಂದೋಲನವನ್ನು ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ಕೆ.ಸಿ. ಸೌಮ್ಯರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.ಹೋಬಳಿಯ ಮಧುರನಹಳ್ಳಿ ಗ್ರಾಮದಲ್ಲಿ ನಡೆದ ಪೌತಿಖಾತೆ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಸೌಮ್ಯ ಅವರು, ಇದುವರೆಗೆ ಪೌತಿ ಖಾತೆ ಆಗದಿರುವ ರೈತರು ಅಗತ್ಯ ದಾಖಲಾತಿಗಳಾದ ವಂಶವೃಕ್ಷ ಆಧಾರ್ ಕಾರ್ಡ್, ಪಹಣಿ, ಮರಣ ದೃಢೀಕರಣ ಪತ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕೇಳುವ ದಾಖಲಾತಿಗಳನ್ನು ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಗ್ರೇಡ್ 2 ಸಿ ಸ್ವಾಮಿ, ರಾಜಸ್ವ ನಿರೀಕ್ಷಕ ಕಿರಣ್ ಭಾಸ್ಕರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಪುನೀತ್ ಮೆಹಬೂಬ್ ಪಟೇಲ್, ಅನುಷಾ, ಪ್ರದೀಪ್ ಕಾಂಬಳೆ, ಮಧುಕುಮಾರ್, ಬಸವರಾಜ್, ಕಾರ್ತಿಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.