ಜಮಖಂಡಿ ನಗರದ ಅಂಬೇಡ್ಕರ್ ಸರ್ಕಲ್ ಹಾಗೂ ಹುನ್ನೂರು ಗ್ರಾಮದಲ್ಲಿ ಅಕ್ರಮ ಮಾವಾ ಮಾರಾಟ ಮಾಡುತ್ತಿದ್ದ ಪಾನ್ ಶಾಪ್‌ಗಳ ಮೇಲೆತಾಲೂಕು ಆರೋಗ್ಯ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಲಾಯಿತು.
ಜಮಖಂಡಿ: ನಗರದ ಅಂಬೇಡ್ಕರ್ ಸರ್ಕಲ್ ಹಾಗೂ ಹುನ್ನೂರು ಗ್ರಾಮದಲ್ಲಿ ಅಕ್ರಮ ಮಾವಾ ಮಾರಾಟ ಮಾಡುತ್ತಿದ್ದ ಪಾನ್ ಶಾಪ್‌ಗಳ ಮೇಲೆತಾಲೂಕು ಆರೋಗ್ಯ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಲಾಯಿತು. ಅಕ್ರಮ ಮಾವಾ ಮಾರಾಟ ಮಾಡುತ್ತಿದ್ದವರ ವಿರುದ್ಧಕೋಟ್ಪಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಹುನ್ನೂರ ಗ್ರಾಮದ ಪಾನ್ ಶಾಪ್ ನಲ್ಲಿ 27 ಮಾವಾ ಪ್ಯಾಕೆಟ್ ಪತ್ತೆಯಾಗಿವೆ. ಪೊಲೀಸರು 7 ಪ್ರಕರಣ ದಾಖಲಿಸಿ ₹3600 ದಂಡ ವಿಧಿಸಿದ್ದಾರೆ. ತಾಲೂಕಿನ ಆರೋಗ್ಯ ಅಧಿಕಾರಿ ಡಾ.ಜಿ.ಎಸ್. ಗಲಗಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ನಾಯಿಕ, ಅಸ್ಲಂ ಅಬಾಲೆ, ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಮಂಜುನಾಥ ದೊಡಮನಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.