ಸಾರಾಂಶ
ಜನರ ಸುರಕ್ಷತೆಗಾಗಿ ಗ್ರಾಮಗಳಲ್ಲಿ ಪೊಲೀಸರು ಬೀಟ್ ಹೆಚ್ಚಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಜಾಗ ಗುರ್ತಿಸಿ ಇ-ಸ್ವತ್ತಿಗೆ ಸತಾಯಿಸದಂತೆ ಗಮನ ಹರಿಸಬೇಕು. ಪ್ರಧಾನ ಮಂತ್ರಿಯವರ ಆಶಯದ ರೈತರಿಗೆ ವಿದ್ಯುತ್ ಸೌಲಭ್ಯಕ್ಕೆ ಸೌರವಿದ್ಯುತ್ ಘಟಕ ಸ್ಥಾಪನೆಗೆ 5 ಎಕರೆ ಸರ್ಕಾರಿ ಜಾಗವನ್ನು ಗುರ್ತಿಸಲು ಮುಂದಾಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೆ.ಆರ್.ಪೇಟೆ ತಾಲೂಕಿನ ಪ್ರತಿ ಗ್ರಾಮಗಳಿಗೂ ಸ್ಮಶಾನನ ಅವಶ್ಯಕತೆ ಇದೆ. ಇರುವ ಸರ್ಕಾರಿ ಜಾಗ ಒತ್ತುವರಿಯಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಮಾದಾಪುರ ಗ್ರಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕನಿಷ್ಠ ವರ್ಷಕ್ಕೆ 3 ಬಾರಿಯಾದರೂ ನಡೆದರೆ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ. ಕಾಟಾಚಾರಕ್ಕೆ ಸಭೆ ನಡೆಸಬಾರದು ಎಂದರು.
ಜನರ ಸುರಕ್ಷತೆಗಾಗಿ ಗ್ರಾಮಗಳಲ್ಲಿ ಪೊಲೀಸರು ಬೀಟ್ ಹೆಚ್ಚಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಜಾಗ ಗುರ್ತಿಸಿ ಇ-ಸ್ವತ್ತಿಗೆ ಸತಾಯಿಸದಂತೆ ಗಮನ ಹರಿಸಬೇಕು. ಪ್ರಧಾನ ಮಂತ್ರಿಯವರ ಆಶಯದ ರೈತರಿಗೆ ವಿದ್ಯುತ್ ಸೌಲಭ್ಯಕ್ಕೆ ಸೌರವಿದ್ಯುತ್ ಘಟಕ ಸ್ಥಾಪನೆಗೆ 5 ಎಕರೆ ಸರ್ಕಾರಿ ಜಾಗವನ್ನು ಗುರ್ತಿಸಲು ಮುಂದಾಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮಾದಾಪುರಕೊಪ್ಪಲು ಗ್ರಾಮದಲ್ಲಿನ ಗುರುಭವನ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಲಕ್ಷಾಂತರ ರು ಗಳಿಂದ ನಿರ್ಮಿತವಾಗಿರುವ ಭವನದಲ್ಲಿ ಶಿಕ್ಷಕರು ವಾಸವಾಗಿಲ್ಲ. ಬಿಸಿಎಂ ಹಾಸ್ಟೆಲ್ ಕೊಠಡಿ ಬಾಡಿಗೆಯಲ್ಲಿ ನಡೆಯುತ್ತಿದೆ. ಈ ಸ್ಥಳಕ್ಕೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಪೌತಿಖಾತೆ ವಾರಸುದಾರ ಕುಟುಂಬಕ್ಕೆ ಮಾಡಲು, 65 ವರ್ಷದ ಮೀರಿದವರಿಗೆ ಹೆಚ್ಚುವರಿ ಮಾಶಾಸನ ನೀಡಲು ಮತ್ತಿತರ ವಿಷಯಗಳನ್ನು ಚರ್ಚಿಸಲಾಯಿತು. ತಾಪಂ ಇಒ ಸುಷ್ಮಾ, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಪಿಡಿಒ ಬಿ.ಪಿ.ಚಂದ್ರು, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಪಂ ಸದಸ್ಯ, ಸ್ವಸಹಾಯ ಸಂಘ ಮಹಿಳೆಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))