ಪಿಡಿಒ ಕರ್ತವ್ಯಲೋಪ: ನಾಗರೀಕರಿಂದ ಪ್ರತಿಭಟನೆ

| Published : May 19 2024, 01:51 AM IST

ಪಿಡಿಒ ಕರ್ತವ್ಯಲೋಪ: ನಾಗರೀಕರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ವ್ಯಾಪ್ತಿಗೆ ಒಳಪಡುವ ಕೆರೆಯೊಂದರಲ್ಲಿ ನರೇಗಾ ಕಾಮಗಾರಿ ನಡೆಸುವ ಮೂಲಕ ಸಿದ್ದಯ್ಯನಪುರ ಪಿಡಿಒ ಕರ್ತವ್ಯಲೋಪ ಎಸಗಿದ್ದು ಹಿರಿಯ ಅಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಾಗರೀಕರು ಶನಿವಾರ ರಂದು ಪ್ರತಿಭಟನೆ ನಡೆಸಿದದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ವ್ಯಾಪ್ತಿಗೆ ಒಳಪಡುವ ಕೆರೆಯೊಂದರಲ್ಲಿ ನರೇಗಾ ಕಾಮಗಾರಿ ನಡೆಸುವ ಮೂಲಕ ಸಿದ್ದಯ್ಯನಪುರ ಪಿಡಿಒ ಕರ್ತವ್ಯಲೋಪ ಎಸಗಿದ್ದು ಹಿರಿಯ ಅಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಾಗರೀಕರು ಶನಿವಾರ ರಂದು ಪ್ರತಿಭಟನೆ ನಡೆಸಿದದರು. ಸಿದ್ದಯ್ಯನಪುರ ಗ್ರಾಪಂ ತಮ್ಮ ವ್ಯಾಪ್ತಿಗೆ ಬರದಿದ್ದರೂ ನರೇಗಾ ಕಾಮಗಾರಿ ನಡೆಸುವ ಮೂಲಕ ಇಲ್ಲಿನ ಪಿಡಿಒ ಶಿವಮೂರ್ತಿ ಕರ್ತವ್ಯ ಲೋಪವನ್ನು ಎಸಗಿದ್ದಾರೆ. ಈ ಮೂಲಕ ಸರ್ಕಾರಿ ಹಣವನ್ನು ಪೋಲು ಮಾಡುವ ಮೂಲಕ ನಿಯಮ ಉಲ್ಲಂಘಿಸಿ, ಇಲ್ಲಿನ ಕೆರೆಯಲ್ಲಿ ಮಣ್ಣು ತೆಗೆಸಿ ಬಂಡಿದಾರಿ ಮಾಡುವ ಮೂಲಕ ಅನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ. ತಮ್ಮ ಗ್ರಾಪಂ ವ್ಯಾಪ್ತಿಗೆ ಸೇರದ ಕೆರೆ ಮತ್ತು ಆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿದ್ದು ಸರಿಯಲ್ಲ, ಈ ಕೂಡಲೆ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭೀಮನಗರದ ಯುವ ಮುಖಂಡ ಸಿದ್ದಾರ್ಥ್, ಉಮೇಶ್ ಮಾತನಾಡಿ, ಪಾಪನ ಕೆರೆಯ ಮಣ್ಣನ್ನು ಎತ್ತುವ ಮೂಲಕ ಲೋಪ ಎಸಗಲಾಗಿದ್ದು ಲಕ್ಷಾಂತರ ಸರ್ಕಾರಿ ಹಣ ಪೋಲು ಮಾಡಲಾಗಿದೆ. ತಕ್ಷಣ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೂ ಮುನ್ನ ಸರ್ಕಾರಿ ಹಣ ನಿಯಮ ಮೀರಿ ಬಳಕೆ ಮಾಡಿಕೊಂಡಿರುವ ಕ್ರಮದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಘಟನೆಗೆ ಕಾರಣರಾದ ತಾಪಂ ಇಒ, ಎಇಇ ಗೋಪಾಲಕೃಷ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪಿ.ಕೃಷ್ಣರಾಜ್, ಜಗದೀಶ್, ಮಹದೇವ, ಪುಟ್ಟರಾಜು, ರಂಗಸ್ವಾಮಿ, ಕಿರಣ್, ಮೋಹನ್, ಸುರೇಶ್, ಉಮೇಶ, ಆಲ್ಬರ್ಟ್ ಮತ್ತಿತರರಿದ್ದರು.