ಸಾರಾಂಶ
ರಾಣಿಬೆನ್ನೂರು: ದೇವರ ಇರುವಿಕೆಯಿಂದ ಬದುಕಿಗೆ ಆಸ್ತಿತ್ವ ಬಂದಿದೆ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ನುಡಿದರು. ತಾಲೂಕಿನ ಲಿಂಗದಹಳ್ಳಿ ಸ್ಫಟಿಕ ಲಿಂಗ ದೇವಸ್ಥಾನದಲ್ಲಿ ಬುಧವಾರ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಗವಂತನ ಸನ್ನಿಧಿ ನಮಗೆ ಶಾಂತಿ, ನೆಮ್ಮದಿ ತಂದು ಕೊಡುತ್ತದೆ ಹಾಗೂ ಭಾವೈಕತೆ ಉಂಟು ಮಾಡುತ್ತದೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ, ಯೋಚನೆ ಮಾಡಲ್ಲ, ರಾಗ ದ್ವೇಷಗಳಿಗೆ ಅವಕಾಶವಿಲ್ಲ. ಆಧುನಿಕ ಸೌಲಭ್ಯ ಇದ್ದರೂ ನಾವು ಯಾರು ದೇವರನ್ನು ಆರಾಧಿಸುವುದನ್ನು ಬಿಟ್ಟಿಲ್ಲ. ಇದು ನಮ್ಮ ಆಚರಣೆ, ಸಂಸ್ಕೃತಿಯಾಗಿದೆ. ಎಷ್ಟೋ ಶತನಮಾನಗಳ ಹಿಂದೆ ಉದ್ಭವ ಲಿಂಗಗಳಿದ್ದು, ಅದನ್ನು ಪೂಜೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಬದುಕಿನ ಗುರಿ ಭಗವಂತನ ಸಾಕ್ಷಾತ್ಕಾರ ಮಾಡುವುದು. ಜೀವಾತ್ಮ ಪರಮಾತ್ಮವಾಗಬೇಕು. ಸಂಸ್ಕಾರ, ಸಂಸ್ಕೃತಿ ರೂಢಿಸಿಕೊಂಡಾಗ ಮಾತ್ರ ಲಿಂಗತ್ವ ಪಡೆಯಲು ಸಾಧ್ಯ. ಇಡೀ ದೇಶದ ತುಂಬಾ ಶಿವನ ಆರಾಧನೆ ಮಾಡುತ್ತಾರೆ ಎಂದರು. ಸಂತೋಷಕುಮಾರ ಪಾಟೀಲ ಮಾತನಾಡಿ, ವಿದ್ಯಾವಂತರು ಧಾರ್ಮಿಕತೆಯಲ್ಲಿ ಅನಕ್ಷರಸ್ಥರಾಗಿದ್ದೇವೆ. ಇಂದಿನ ಸಾಮಾಜಿಕ ಜಾಲ ತಾಣದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದೇವೆ. ಗುರುಗಳ ಆರಾಧನೆಯಿಂದ ಬದುಕು ಸುಂದರಗೊಳುತ್ತಿದೆ. ಲಿಂಗದಹಳ್ಳಿಯಲ್ಲಿ ಇಡೀ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜ್ಯೋತಿರ್ಲಿಂಗ ಸ್ಥಾಪನೆ ಮಾಡಿದ್ದಾರೆ. ಧರ್ಮಸ್ಥಳ ಲಿಂಗ ಕಾಶಿಯ ಸಾಲಿಗ್ರಾಮದಿಂದ ತರಲಾಗಿದ್ದು, ಅದು ಯಾವ ರೀತಿ ಇಡೀ ಜಗತ್ತಿನಲ್ಲಿ ಹೆಸರು ಮಾಡಿದೆ. ಅದೇ ರೀತಿ ಲಿಂಗದಹಳ್ಳಿ ಮಠ ಹೆಸರು ಮಾಡಲಿ ಎಂದರು.ಲಿಂಗದಹಳ್ಳಿ ಮಠದ ವೀರಭದ್ರ ಶಿವಾಚಾರ್ಯರು, ಶಿಕಾರಿಪುರದ ಗುರುಲಿಂಗ ಜಂಗಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರವೀಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಾಪುರ, ಚಂದ್ರಣ್ಣ ಬೇಡರ, ಕೊಟ್ರೇಶಪ್ಪ ಎಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ, ಶಿವಕುಮಾರ ಜಾಧವ, ಹನುಮಂತಪ್ಪ ಕಬ್ಬಾರ ಮತ್ತಿತರರಿದ್ದರು.ಇಂದು ಮಹಾರಥೋತ್ಸವಶಿಗ್ಗಾಂವಿ: ತಾಲೂಕಿನ ಹಿರೇಮಣಕಟ್ಟಿಯ ಮುರುಘೇಂದ್ರಸ್ವಾಮಿಯ ೭೩ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾರಥೋತ್ಸವ ಫೆ. 27ರಂದು ಸಂಜೆ 5 ಗಂಟೆ ನೆರವೇರಲಿದೆ.ಬೆಳಗ್ಗೆ ವೀರಭದ್ರ ಶಿವಯೋಗಿಗಳ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಪ್ತಾಹ ಮಂಗಲ, ಕಾರ್ಯಕ್ರಮ ವಿಶ್ವಾರಾಧ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವುದು.ಫೆ. ೨೮ರಂದು ಬೆಳಗ್ಗೆ ರುದ್ರಾಭಿಷೇಕ ನೆರವೇರಲಿದೆ. ಸಂಜೆ ೫ ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ. ಸಂಜೆ ೭ ಗಂಟೆಗೆ ಧರ್ಮಸಭೆಯ ಸಾನ್ನಿಧ್ಯವನ್ನು ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಶಿವಬಸವ ಸ್ವಾಮಿಗಳ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷತೆ ವಹಿಸುವರು.