ಯೋಗ, ಪ್ರಾಣಾಯಾಮ, ವ್ಯಾಯಾಮ, ದೇಹದಲ್ಲಿ ಸಂತೋಷ ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಬಳಕೆಯನ್ನು ಅಗತ್ಯಕ್ಕಷ್ಟೆ ಬಳಸುವುದು, ಮನಸ್ಸಿನಲ್ಲಿರುವ ಆತಂಕ ಅಥವಾ ಭಾವನೆಗಳನ್ನು ನಂಬಿಕಸ್ಥ ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಮನಸ್ಸಿನ ಖಿನ್ನತೆಯನ್ನು ದೂರು ಮಾಡುತ್ತದೆ. ಜತೆಗೆ ಅವರು ನೀಡುವ ಸಲಹೆ ಅಥವಾ ಮಾರ್ಗದರ್ಶನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಯೋಗೀಂದ್ರ ಶೆಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಯೋಗ, ಪ್ರಾಣಾಯಾಮ, ವ್ಯಾಯಾಮ, ದೇಹದಲ್ಲಿ ಸಂತೋಷ ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಬಳಕೆಯನ್ನು ಅಗತ್ಯಕ್ಕಷ್ಟೆ ಬಳಸುವುದು, ಮನಸ್ಸಿನಲ್ಲಿರುವ ಆತಂಕ ಅಥವಾ ಭಾವನೆಗಳನ್ನು ನಂಬಿಕಸ್ಥ ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಮನಸ್ಸಿನ ಖಿನ್ನತೆಯನ್ನು ದೂರು ಮಾಡುತ್ತದೆ. ಜತೆಗೆ ಅವರು ನೀಡುವ ಸಲಹೆ ಅಥವಾ ಮಾರ್ಗದರ್ಶನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಯೋಗೀಂದ್ರ ಶೆಟ್ಟಿ ತಿಳಿಸಿದರು. ತಾಲೂಕಿನ ನಾಗಲಾಪುರದಲ್ಲಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ ಮತ್ತು ಸಮಸ್ಯೆ ಬಂದೇ ಬರುತ್ತದೆ, ಆದ್ದರಿಂದ ಸಮಸ್ಯೆಗೆ ಹೆದರಬಾರದು, ಸವಾಲುಗಳನ್ನು ಎದರಿಸುವ ಅಥವಾ ಪರಿಹರಿಸುವ ಮನಸ್ಥಿತಿ ರೂಪಿಸಿಕೊಳ್ಳಬೇಕು. ದೈಹಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವಷ್ಟೆ ಸಹಜವಾಗಿ ಮಾನಸಿಕ ಆರೋಗ್ಯಕ್ಕೂ ಅಗತ್ಯವಿದ್ದಾಗ ಮನಶಾಸ್ತ್ರಜ್ಞರು ಅಥವಾ ಕೌನ್ಸಿಲರ್ಗಳ ಮಾರ್ಗದರ್ಶನ ಪಡೆಯುವುದು ಮುಖ್ಯವಾಗಿದೆ. ಮಾನಸಿಕ ಸಧೃಡತೆ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸೋಣವೆಂದು ಕರೆಕೊಟ್ಟರು. ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಎಸ್.ಗುಡದಿನ್ನಿ ಅವರು ಮಾತನಾಡಿ ಐಟಿಐ ವಿದ್ಯಾರ್ಥಿಗಳಾದ ನಿಮಗೆ ಯಂತ್ರವು ಕೆಟ್ಟಾಗ, ಯಂತ್ರದ ಸಮಸ್ಯೆ ಕುರಿತು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುತ್ತೀರಿ. ಕೆಲವೊಮ್ಮೆ ಕೆಲಸದ ಒತ್ತಡದಿಂದ ಯಂತ್ರವೂ ತುಂಬಾ ಬಿಸಿಯಾಗಿ ನಿಂತು ಹೋದಾಗ, ತನ್ನಗಾಗಲಿ ಎಂದು ಯಂತ್ರದ ಸ್ವಿಚ್ ಆಫ್ ಮಾಡುತ್ತೀರಿ. ಅದೇ ರೀತಿ ಮನುಷ್ಯನಲ್ಲೂ ಕೆಲಸದ ಒತ್ತಡ ಹೆಚ್ಚಾದಾಗ ವಿಶ್ರಾಂತಿ ಅತ್ಯಗತ್ಯ ಮತ್ತು ಮನಸ್ಸಿನ ಸ್ವಾಸ್ಥ್ಯ ಅಥವಾ ಮನಸ್ಸಿಗೆ ಸಂತೋಷ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಸಮಾಜದಲ್ಲಿ ಗಂಡಸರಿಗೆ ಜವಾಬ್ದಾರಿ ಮತ್ತು ಹೊಣೆಗಾರಿಗೆ ಜಾಸ್ತಿ. ಇಂತಹ ಸನ್ನಿವೇಶದಲ್ಲಿ ಎಷ್ಟೆ ಕಷ್ಟ ಬಂದರೂ, ಅದನ್ನು ನಿಭಾಯಿಸುವ ಮನಸ್ಥಿತಿ ಅತ್ಯಗತ್ಯ. ತಾಳ್ಮೆ ಹಾಗೂ ಸಮಸ್ಯೆ ನಿವಾರಣೆಗೆ ಸಮಾನ ಮನಸ್ಥಿತಿ ಅತ್ಯಗತ್ಯ. ಆದ್ದರಿಂದ ಪ್ರಧಾನ ಸಿವಿಲ್ ನ್ಯಾಯಾಧೀಶರು ತಿಳಿಸಿದಂತೆ ಯೋಗ, ಪ್ರಾಣಾಯಾಮ, ವ್ಯಾಯಾಮ, ದೇಹದಲ್ಲಿ ಸಂತೋ? ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕರೆಕೊಟ್ಟರು. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ತಜ್ಞರಾದ ಡಾ. ಕಾರ್ತಿಕ್ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉಪನ್ಯಾಸಕಿ ಪುಷ್ಪಲತಾ ಸ್ವಾಗತಿಸಿ, ನಿರೂಪಿಸಿದರು. ಐಟಿಐ ಕಾಲೇಜಿನ ಪ್ರ. ಪ್ರಾಂಶುಪಾಲೆ ಅನುರಾಧ, ಕುಟುಂಬ ಕಲ್ಯಾಣ ಇಲಾಖೆಯ ವಿದ್ಯಾ ಹಾಗೂ ಸುಮಲತಾ, ಐಟಿಐ ಕಾಲೇಜಿನ ಕಚೇರಿ ಅಧೀಕ್ಷಕಿ ಅನಿತಾ, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.