ಮಠ, ಮಂದಿರಗಳಲ್ಲಿನ ನೆಮ್ಮದಿ ಬೇರೆಲ್ಲೂ ಸಿಗದು: ಎಂ.ಜಿ. ಹಿರೇಮಠ

| Published : Sep 17 2024, 12:46 AM IST

ಮಠ, ಮಂದಿರಗಳಲ್ಲಿನ ನೆಮ್ಮದಿ ಬೇರೆಲ್ಲೂ ಸಿಗದು: ಎಂ.ಜಿ. ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಮಠ ಮಂದಿರಗಳುಸಂಸ್ಕೃತಿಯ ಪ್ರತೀಕ. ಇಲ್ಲಿ ಸಲ್ಲಿಸುವ ಪ್ರಾರ್ಥನೆಗಳಿಂದ ನಮಗೆ ಸಿಗುವ ನೆಮ್ಮದಿ ಬೇರೆಲ್ಲೂ ಸಿಗದು ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಠ ಮಂದಿರಗಳುಸಂಸ್ಕೃತಿಯ ಪ್ರತೀಕ. ಇಲ್ಲಿ ಸಲ್ಲಿಸುವ ಪ್ರಾರ್ಥನೆಗಳಿಂದ ನಮಗೆ ಸಿಗುವ ನೆಮ್ಮದಿ ಬೇರೆಲ್ಲೂ ಸಿಗದು ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಹೇಳಿದರು.

ಭಾನುವಾರ ಬೆಳಗಾವಿ ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಳಸಾರೋಹಣ ಕಾರ್ಯಕ್ರಮದ ಕುಂಭಮೇಳ ಮೆರೆವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮಲ್ಲಿ ಭಯ ಭಕ್ತಿ ಇರಬೇಕು. ದೇವರ ಬಗ್ಗೆ ನಂಬಿಕೆ ಬೇಕು. ಹನುಮಂತ ಶಕ್ತಿಯ ಪ್ರತೀಕ. ಅವನು ನಂಬಿದ ಭಕ್ತರ ಕೈ ಬಿಡನು. ರಾಮಾಯಣದಲ್ಲಿ ಹನುಮಂತನ ಭಕ್ತಿ ಮತ್ತು ಶಕ್ತಿಯ ಬಗ್ಗೆ ತಿಳಿಸಲಾಗಿದೆ. ರಾಮತೀರ್ಥನಗರದಲ್ಲಿಯ ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಮಹಿಮೆಗೆ ಶಬ್ಧಗಳು ಸಾಲದು. ದೇವಸ್ಥಾನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸಮಾಜದ ಶಕ್ತಿ ಎಂದು ಅಭಿಪ್ರಾಯಪಟ್ಟರು.ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ಮಾತನಾಡಿ, ನಮ್ಮಲ್ಲಿ ಸಮಾಜ ಸೇವಾ ಭಾವನೆ ಕಳೆದುಕೊಂಡು, ಬಡತನದಲ್ಲಿದ್ದೇವೆ. ನಮ್ಮತನದ ಗುಣ ಸ್ವಭಾವದಿಂದಾಗಿ ಏನನ್ನೂ ಸಾಧಿಸಲಾಗದ ಸ್ಥಿತಿ ನಮ್ಮದಾಗಿದೆ. ಗುಡಿ ನಿರ್ಮಾಣ ಮಾಡುವುದು ಸಣ್ಣ ಕೆಲಸವಲ್ಲ. ಇದನ್ನು ಮಾಡಿದವರಿಗೆ ನಾವು ವಿಧೇಯರಾಗಿರಬೇಕು ಎಂದರು.

ಅತಿಥಿಯಾಗಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ಮಾತನಾಡಿ, ಪರಿಸರ ಶುಚಿತ್ವಕ್ಕೆ ಹೆಸರಾದ ಈ ದೇವಸ್ಥಾನ ಎಲ್ಲ ಭಕ್ತರಿಗೂ ಮಾದರಿ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಸೇವಕ ಹನುಮಂತ ಕೊಂಗಾಲಿ, ಮಾಜಿ ಮೇಯರ್‌ ಎನ್.ಬಿ. ನಿರ್ವಾಣಿ, ಸುರೇಶ ಯಾದವ, ರಾಜೇಂದ್ರ ಗೌಡಪ್ಪಗೋಳ, ಡಾ.ಕಿರಣ ಉರಬಿನಹಟ್ಟಿ, ಅಧ್ಯಕ್ಷ ಸುರೇಶ ಉರಬಿನಹಟ್ಟಿ ಇದ್ದರು.

ಸಂಘದ ಪರ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಶ ಹೊತ್ತ ವಾಹನ ರಾಮತೀರ್ಥ ನಗರದ ಪ್ರಮುಖ ಬೀದಿಗಳಲ್ಲಿ ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಪ್ರೊ.ಎ.ಕೆ. ಪಾಟೀಲ ನಿರೂಪಿಸಿದರು.

ಸಂಘದ ಸದಸ್ಯರಾದ ಕೃಷ್ಣಾ ಪಾಟೀಲ, ಕಲ್ಲಪ್ಪ ಮಜಾಲಟ್ಟಿ, ಜಿ.ಐ. ದಳವಾಯಿ, ಮನೋಹರ ಕಾಜಗಾರ, ಡಿ.ಎಂ. ಟೊಣ್ಣೆ, ಮಹೇಶ ಚಿಟಗಿ, ಮಹೇಶ ಮಾವಿನಕಟ್ಟಿ, ಮಲ್ಹಾರ ದೀಕ್ಷಿತ, ಈರಣ್ಣ ಕಟ್ಟಾವಿ, ಎಸ್.ಜಿ. ಕಲ್ಯಾಣಿ, ಎಸ್.ಸಿ. ಕಮತ್, ಜಿ.ಎಸ್. ಪಾಟೀಲ, ಎಸ್.ಎಲ್. ಸನದಿ, ಮಲ್ಲಪ್ಪ ದಂಡಿನವರ, ಬಸವರಾಜ ಗೌಡಪ್ಪಗೋಳ, ಸಿದ್ದಪ್ಪ ತೇರಣಿ, ರಾಜೇಂದ್ರ ರತನ್ ಸೇರಿದಂತೆ ಸಕಲ ಭಕ್ತರು, ಮಹಿಳೆಯರು ಇದ್ದರು.