ಯಲಬುರ್ಗಾ: ಶಿವಶರಣ ಜೀವನ ಚರಿತ್ರೆ ಕುರಿತು ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಕೊಟ್ಟೂರಿನ ಶ್ರೀಸಂಗಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಸಂಗನಹಾಳ ಗ್ರಾಮದ ಹಾಲಕೇರಿ ಅನ್ನದಾನೇಶ್ವರ ಶಾಖಾಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀಅನ್ನದಾನ ಶಿವಯೋಗಿಗಳ ಪುರಾಣ ಪ್ರವಚನ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮರ ಉತ್ತಮ ಸಂದೇಶ ಬದುಕಿನಲ್ಲಿ ಪಾಲಿಸುವ ಕಾರ್ಯವಾಗಬೇಕು. ಇಡೀ ನಾಡಿಗೆ ಅನ್ನದಾನೇಶ್ವರಮಠ ಬಹುದೊಡ್ಡ ಕೊಡುಗೆ ನೀಡಿದೆ. ಅನ್ನ, ಅಕ್ಷರ,ಶಿಕ್ಷಣ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಠವು ಸಮಾಜಮುಖಿ ಸೇವೆ ಮಾಡಿದೆ.‌ ಶ್ರೀಗಳು ಪೂಜ್ಯರ ಶಕ್ತಿಯಿಂದ ಭಕ್ತರ ಏಳಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ವರ್ಗದ ಅಭಿವೃದ್ಧಿಗೆ ಮಠದ ಕೊಡುಗೆ ಅನನ್ಯವಿದೆ. ಧಾನ, ಧರ್ಮ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಪ್ರವಚನಕಾರ ಶರಣಯ್ಯ ಹಿರೇಮಠ, ತಬಲಾ ವಾದಕ ವೀರೇಶಕುಮಾರ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಶರಣಪ್ಪ ಅಡವಳ್ಳಿ, ಸಂಗಪಗಪ ಶಿವರಡ್ಡಿ, ಗಣೇಶಪ್ಪ ಕಮ್ಮಾರ, ಯಲ್ಲಪ್ಪ ಅಡವಳ್ಳಿ, ಸೋಮಶೇಖರ ಗಡಾದ, ಗಿರಿಯಪ್ಪ ಹೊಸಮನಿ, ಶರಣಯ್ಯ ಶಾಸ್ತ್ರೀಮಠ, ಸಂಗಪ್ಪ ಸಿಂದೋಗಿ, ಹನುಮಂತ ಕೊಣ್ಣೂರ, ಬಸವರಾಜ ಅಡವಳ್ಳಿ ಹಾಗೂ ಗ್ರಾಮಸ್ಥರು ಇದ್ದರು.