ದೇವರ ಸ್ಮರಣೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನಿಗೆ ಅಂತರಂಗದ ಶಾಂತಿ ಸಿಗುತ್ತದೆ. ಸತ್ಪಥದಲ್ಲಿ ನಡೆದು ಸೇವಾಭಾವದಿಂದ ಬದುಕಿದರೆ ಮೋಕ್ಷಪಡೆಯಲು ಸಾಧ್ಯ ಎಂದು ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಶ್ರೀಮಠದ ಪೀಠಾಧಿಪತಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸದ್ಗುರು ಸಿದ್ಧಮಲ್ಲಾರ್ಯರ ತಪೋಮಹಿಮೆಯಿಂದ ಪವಿತ್ರವಾಗಿರುವ ಈ ಕ್ಷೇತ್ರದಲ್ಲಿ ನಿತ್ಯವೂ ಶ್ರೀಗುರು ಸಪ್ತಾಹ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ದಾನಿಗಳು ಮತ್ತು ಭಕ್ತರ ಸಹಕಾರದಿಂದ ನಿರ್ಮಿತವಾದ ಈ ಭಜನಾ ಮಂದಿರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದ್ಬಳಕೆಯಾಗಲಿ ಎಂದು ಹೇಳಿದರು.

ಅರಸೀಕೆರೆ: ದೇವರ ಸ್ಮರಣೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನಿಗೆ ಅಂತರಂಗದ ಶಾಂತಿ ಸಿಗುತ್ತದೆ. ಸತ್ಪಥದಲ್ಲಿ ನಡೆದು ಸೇವಾಭಾವದಿಂದ ಬದುಕಿದರೆ ಮೋಕ್ಷಪಡೆಯಲು ಸಾಧ್ಯ ಎಂದು ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಶ್ರೀಮಠದ ಪೀಠಾಧಿಪತಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಚಲುವನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗವಿಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಗುರು ಭಜನಾ ಮಂದಿರವನ್ನು ಸ್ವಾಮೀಜಿ ಲೋಕಾರ್ಪಣೆಗೊಳಿಸಿ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸದ್ಗುರು ಸಿದ್ಧಮಲ್ಲಾರ್ಯರ ತಪೋಮಹಿಮೆಯಿಂದ ಪವಿತ್ರವಾಗಿರುವ ಈ ಕ್ಷೇತ್ರದಲ್ಲಿ ನಿತ್ಯವೂ ಶ್ರೀಗುರು ಸಪ್ತಾಹ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ದಾನಿಗಳು ಮತ್ತು ಭಕ್ತರ ಸಹಕಾರದಿಂದ ನಿರ್ಮಿತವಾದ ಈ ಭಜನಾ ಮಂದಿರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದ್ಬಳಕೆಯಾಗಲಿ ಎಂದು ಹೇಳಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್ ಮಾತನಾಡಿ, ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ಸಮತ್ವದ ಸಮಾಜದ ದಾರಿಗೆ ದೀಪ ಹಿಡಿದರು. ಅವರ ಆದರ್ಶ ಮಾರ್ಗದಲ್ಲಿ ಕೆರಗೋಡಿ ರಂಗಾಪುರ ಶ್ರೀಮಠ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಹಸಿದವರಿಗೆ ಅನ್ನ, ಅಕ್ಷರ, ಅರಿವು ನೀಡಿ ಸಮಾಜದ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿರುವ ಸ್ವಾಮೀಜಿಯವರ ಕಳಕಳಿ ಆದರ್ಶ ಎಂದು ಹೇಳಿದರು.

ಶ್ರೀಕ್ಷೇತ್ರ ಭಕ್ತರ ಸಂಘದ ಅಧ್ಯಕ್ಷ ಯು.ಕೆ. ಶಿವಪ್ಪ ಸೇರಿ ಅನೇಕರು ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಜಾವಗಲ್ ರಾಜಶೇಖರ್, ಇಂಜಿನಿಯರ್ ಪ್ರಕಾಶ್, ಬಸವರಾಜು, ಗುತ್ತಿಗೆದಾರ ಹರೀಶ್, ಕಾಟೀಕೆರೆ ಶಂಕರಪ್ಪ, ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮೋಡಿ ಮಾಡಿದವು.