ಮನಸ್ಸು, ಮಾತು, ದೇಹ ಹಾಗೂ ವ್ಯಕ್ತಿತ್ವ ಶುದ್ಧವಾಗಿರುವ ಜೀವನದಲ್ಲಿ ನಿಜವಾದ ಸಂತೋಷ ಮತ್ತು ನೆಮ್ಮದಿ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಟೀಮ್‌ ಇವಾಲ್ವ್‌ ಹಾಗೂ ಆಕಾಂಕ್ಷ ಟ್ರಸ್ಟ್‌ ಹಮ್ಮಿಕೊಂಡಿರುವ ವಿದ್ಯಾರ್ಥಿಗಳ ಮನೋಬಲ ಹಿಗ್ಗಿಸುವ ಕಾರ್ಯಕ್ರಮ ವಿದ್ಯಾರ್ಥಿಗಳ ಜೀವನದಲ್ಲಿ ಸಂತೋಷ ಒದಗಿಸಲು ಪೂರಕವಾಗಿದೆ ಎಂದು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಆ್ಯಂಡ್ರೋ ಡಿ' ಸೋಜ ಅಭಿಪ್ರಾಯಪಟ್ಟರು.

ಉಳ್ಳಾಲ : ಮನಸ್ಸು, ಮಾತು, ದೇಹ ಹಾಗೂ ವ್ಯಕ್ತಿತ್ವ ಶುದ್ಧವಾಗಿರುವ ಜೀವನದಲ್ಲಿ ನಿಜವಾದ ಸಂತೋಷ ಮತ್ತು ನೆಮ್ಮದಿ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಟೀಮ್‌ ಇವಾಲ್ವ್‌ ಹಾಗೂ ಆಕಾಂಕ್ಷ ಟ್ರಸ್ಟ್‌ ಹಮ್ಮಿಕೊಂಡಿರುವ ವಿದ್ಯಾರ್ಥಿಗಳ ಮನೋಬಲ ಹಿಗ್ಗಿಸುವ ಕಾರ್ಯಕ್ರಮ ವಿದ್ಯಾರ್ಥಿಗಳ ಜೀವನದಲ್ಲಿ ಸಂತೋಷ ಒದಗಿಸಲು ಪೂರಕವಾಗಿದೆ ಎಂದು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಆ್ಯಂಡ್ರೋ ಡಿ'''' ಸೋಜ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಪೆರ್ಮನ್ನೂರಿನ ಅನುದಾನಿತ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಹಾಗೂ ಟೀಮ್ ಇವಾಲ್ವ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಸ್ವಾಸ್ಥ್ಯ ಮತ್ತು ಸಬಲೀಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಟೀಮ್ ಇವಾಲ್ವ್‌ ಅಧ್ಯಕ್ಷೆ ಗ್ಲಾನ್ಸಿ ಫೆರ್ನಾಂಡಿಸ್‌ ಮಾತನಾಡಿದರು. ಆಕಾಂಕ್ಷ ಚಾರಿಟೇಬಲ್‌ ಟ್ರಸ್ಟ್‌ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಶ್ರೀಶ ಭಟ್ ಮಾತನಾಡಿ, ಜೀವನದಲ್ಲಿ ಸಂತೋಷವಾಗಿರಬೇಕಾದರೆ ಮೊದಲು ನಮ್ಮನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ ಸಿಕ್ವೇರಾ ಅವರು ಶಾಲಾ ವಾಚನಾಲಯಕ್ಕೆ ಟ್ರಸ್ಟ್‌ ನವರು 250 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು.

ಸಿಎಸ್‌ಆರ್‌ ಮತ್ತು ಪಾಲುದಾರಿಕೆ ವ್ಯವಸ್ಥಾಪಕಿ ಲತಾ, ಇಂಟರ್ನ್‌ಗಳಾದ ಶರ್ಮಿಳಾ ಹಾಗೂ ಸೌಜನ್ಯ, ರಾಜೇಶ್ವರಿ ಎನ್., ಶರಣ್ಯ ಸೇರಿದಂತೆ ನಿರ್ವಹಣಾ ಸಮಿತಿಯ ಸದಸ್ಯರು ಇದ್ದರು.

ಆಕಾಂಕ್ಷ ಚಾರಿಟೇಬಲ್‌ ಟ್ರಸ್ಟಿನ ಸದಸ್ಯೆ ಅಮಿತಾ ಅಶ್ವಿನ್ ಉಳ್ಳಾಲ್ ಸ್ವಾಗತಿಸಿದರು. ಹೇಮಂತ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ ಸಿಕ್ವೇರಾ ವಂದಿಸಿದರು.