ಸಾರಾಂಶ
ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಆಡಳಿತ ಸೌಧದ ತಹಶೀಲ್ದಾರ ಕಚೇರಿಯಲ್ಲಿ ಜಂಗಮ, ಬೇಡಜಂಗಮ, ತಹಶೀಲ್ದಾರರ ಸಹಯೋಗದಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಬುಧವಾರ ನಡೆಯಿತು.
ಶಿರಸ್ತೇದಾರ ಸುರೇಶ ವೈ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿಯೊಂದಿಗೆ ಪುಷ್ಪ ಅರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬೇಡ ಜಂಗಮ ಸಮಾಜದ ಉಪಾಧ್ಯಕ್ಷ ಗುರುಮಠಪತಿ, ಶಂಕ್ರಯ್ಯ ಹಿರೇಮಠ ಮಾನವ ಕುಲದ ಉದ್ಧಾರಕ್ಕಾಗಿ ರೇಣುಕಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು. ಮಾನವ ಧರ್ಮದ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಜಗದ್ಗುರು ಹಾಕಿಕೊಟ್ಟ ಮಾರ್ಗದಲ್ಲಿ ಸಾಬೇಕು ಎಂದರು.
ಕಾರ್ಯಕ್ರಮದಲ್ಲಿ ಬೇಡಜಂಗಮ ಸಮಾಜದ ಹಿರಿಯರಾದ ಸಿ.ಎಸ್. ವಸ್ತ್ರದ ಹಾಗೂ ಗಂಗಯ್ಯ ಹಿರೇಮಠ ಅವರನ್ನು ಗೌರವ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯ ಅಧಿಕಾರಿಗಳಾದ ಗೋಪಿ ಚವ್ಹಾಣ, ಮುಕುಂದ ಬಿ., ದೀಪಾಲಿ, ಗೌಡಪ್ಪ ಬಂಕದಿನ್ನಿ, ಬೇಡಜಂಗಮ ಸಮಾಜದ ಗೌರವಾಧ್ಯಕ್ಷ ಶಶಿಧರ ಓಷಿಮಠ, ಅಧ್ಯಕ್ಷ ಮಧುಕೇಶ್ವರಯ್ಯ ಹಿರೇಮಠ, ಉಪಾಧ್ಯಕ್ಷರಾದ ಡಾ.ಶೇಖರ ಹಂಚಿನಾಳಮಠ, ಗುರು ಮಠಪತಿ, ಕಾರ್ಯದರ್ಶಿ ಶಂಕ್ರಯ್ಯ ಹಿರೇಮಠ, ಖಜಾಂಚಿ ಜಿ.ಎಸ್.ಅಣ್ಣಿಗೇರಿ, ಬಸವರಾಜ ಕಲಶೆಟ್ಟಿ, ಶಂಕರಯ್ಯ ಜಡೆಹಿರೇಮಠ, ಶ್ರೀಶೈಲ ಹಿರೇಮಠ, ವೀರಸಂಗಯ್ಯ ಕುಲಕರ್ಣಿ, ಕಲ್ಲಯ್ಯ ಪೂಜಾರ, ಶಂತಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಬಸಯ್ಯ ಚಿಕ್ಕಮಠ, ಮಲ್ಲಿಕಾರ್ಜುನ ಹಿರೇಮಠ, ಬಿ.ಎಸ್.ಕೊಪ್ಪದ, ಅಂದಾನಯ್ಯ ಹಿರೇಮಠ, ಸಜ್ಜೊದಾತಸ್ವಾಮಿಹಿರೇಮಠ, ಬಿ.ಎಸ್.ನಾಗಶೆಟ್ಟಿಕೊಪ್ಪಮಠ, ಈರಯ್ಯ ಗೊಡಚಿಮಠ, ಎಂ.ಸಿ. ಹಿರೇಮಠ, ಸಂಗಮೇಶ ಹಿರೇಮಠ, ಈರಯ್ಯ ಹೊಸಮಠ, ಎಸ್.ಎಸ್. ಹಿರೇಮಠ, ಪ್ರದೀಪ ಜಿ.ಎಂ., ಅಜಯ್ಯ ಹಿರೇಮಠ, ನಾಗಭೂಷನ ಹಿರೇಮಠ, ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.
ತಹಶೀಲ್ದಾರ ಕಚೇರಿಯ ಸರಸ್ವತಿ ಸ್ವಾಗತಿಸಿದರು, ವಂದಿಸಿದರು.