ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

| Published : Apr 27 2024, 01:18 AM IST

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಾದ್ಯಾಂತ ಬೆಳಿಗ್ಗಿನಿಂದಲೇ ಮತದಾನ ಬಿರುಸಾಗಿ ಸಾಗಿತ್ತು. ಕ್ಷೇತ್ರದ ಎರಡು ಬೂತ್‌ಗಳಲ್ಲಿ ಮತ ಯಂತ್ರದ ದೋಷಗಳಿಂದಾಗಿ ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಯಿತು. ಉಳಿದಂತೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರಿಯಿತು.

ಕನ್ನಡಪ್ರಭ ವಾರ್ತೆ ಸುಳ್ಯ ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಕಡೆ ಮತಯಂತ್ರಗಳು ಕೈಕೊಟ್ಟ ಘಟನೆಗಳನ್ನು ಬಿಟ್ಟು ಯಾವುದೇ ಅಹಿತಕರ ಘಟನೆಗಳು ನಡೆಯದೇ ಮತದಾನ ಶಾಂತಿಯುತವಾಗಿ ನಡೆದಿದೆ.

ತಾಲೂಕಿನಾದ್ಯಾಂತ ಬೆಳಿಗ್ಗಿನಿಂದಲೇ ಮತದಾನ ಬಿರುಸಾಗಿ ಸಾಗಿತ್ತು. ಕ್ಷೇತ್ರದ ಎರಡು ಬೂತ್‌ಗಳಲ್ಲಿ ಮತ ಯಂತ್ರದ ದೋಷಗಳಿಂದಾಗಿ ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಯಿತು. ಉಳಿದಂತೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರಿಯಿತು. ಕೈ ಕೊಟ್ಟ ಮತಯಂತ್ರ : ಗುತ್ತಿಗಾರು ಗ್ರಾಮದ ಮೊಗ್ರ ಮತಗಟ್ಟೆ ಕೇಂದ್ರದಲ್ಲಿ ಮತಯಂತ್ರದಲ್ಲಿ ಕೆಲಕಾಲ ತಾಂತ್ರಿಕ ದೋಷ ಕಂಡುಬಂದಿತು. ಸುಮಾರು ೧ ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಸಂಜೆಯ ವೇಳೆಗೆ ಮತಯಂತ್ರ ಕೈಕೊಟ್ಟಿದೆ. ಬಳಿಕ ಅಧಿಕಾರಿಗಳು ಯಂತ್ರ ಸರಿಪಡಿಸಿದರು. ಸುಮಾರು ಮುಕ್ಕಾಲು ಗಂಟೆಯ ಬಳಿಕ ಮತದಾನ ಮುಂದುವರಿಯುತು.ಸೂಕ್ಷ್ಮ ಮತಗಟ್ಟೆಯಲ್ಲಿ ಬಿಗಿ ಭದ್ರತೆ: ನಕ್ಸಲ್ ಸಕ್ರಿಯ ಪ್ರದೇಶಗಳು ೧೮ ಮತಗಟ್ಟೆ ಮತ್ತು ಅತಿ ಸೂಕ್ಷ್ಮ ೧೯ ಮತಗಟ್ಟೆ ಸೇರಿ ಒಟ್ಟು ೩೭ ಕ್ರಿಟಿಕಲ್ ಬೂತ್‌ಗಳೆಂದು ಗುರುತಿಸಲಾಗಿತ್ತು. ಈ ಬೂತ್‌ಗಳಲ್ಲಿ ಪೊಲೀಸರ ಜೊತೆಗೆ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನಕ್ಸಲ್ ಸಕ್ರಿಯ ಪ್ರದೇಶದ ಮತಗಟ್ಟೆಗಳಿಗೆ ಎಸ್ಪಿ ರಿಷ್ಯಂತ್ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆಲ ನಕ್ಸಲ್ ಪೀಡಿತ, ಸೂಕ್ಷ್ಮ ಹಾಗೂ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದರು.

ಸುಳ್ಯದ ಅಡ್ಕಾರು ಸರ್ಕಾರಿ ಶಾಲಾ ಮತಗಟ್ಟೆಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಜತೆಗಿದ್ದರು.