ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರವಾಹನಗಳಿಗೆ ಎಲ್‌ಇಡಿ ಲೈಟ್ ಅಳವಡಿಸುವುದನ್ನು ರಾಜ್ಯ ಸರ್ಕಾರ ಈಗಾಗಲೇ ನಿಷೇಧಿಸಿದ್ದು, ನಿಯಮ ಉಲ್ಲಂಘಿಸುವ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೆಚ್ಚು ಬೆಳಕು ನೀಡುವ ಎಲ್‌ಇಡಿ ಲೈಟ್ಸ್‌ಗಳನ್ನು ವಾಹನಗಳಿಗೆ ಅಳವಡಿಸುವುದರಿಂದ ಎದುರುಗಡೆ ಬರುವ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಇದು ಅನೇಕ ಅಪಘಾತಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕಣ್ಣಿಗೆ ಕುಕ್ಕುವ ಎಲ್‌ಇಡಿ ಲೈಟ್ಸ್ ಅಳವಡಿಸುವುದನ್ನು ನಿಷೇಧಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ದಂಡಈಗಾಗಲೇ ವಾಹನಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಿರುವವರು ತೆರವುಗೊಳಿಸಲು ಕಾಲಾವಕಾಶ ನೀಡಿತ್ತು. ಆದರೂ ಸಹ ಸಾಕಷ್ಟು ಮಂದಿ ಈಗಲೂ ಅದನ್ನೇ ಅಳವಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವವರನ್ನು ಹಿಡಿದು ದಂಡ ವಿಧಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಲಾರಿ, ಟ್ರಕ್, ಕಾರು, ಟೆಂಪೋ, ಟಾಟಾಏಸ್, ಆಟೋ ಸೇರಿ ಬೈಕ್‌ಗಳಿಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ. ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಅನುಮತಿ ನೀಡಿರುವ ದೀಪಗಳನ್ನು ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್‌ಇಡಿ ರ್ನಿಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಈಗಾಗಲೇ ವ್ಯಾಪಕ ಪ್ರಚಾರ ನಡೆಸಿದ್ದಾರೆ.
ಜಿಲ್ಲೆಯಲ್ಲಿ 46 ಪ್ರಕರಣ ದಾಖಲುಜು.೧ರಿಂದ ದಂಡ ಹೇರಿಕೆ ಪ್ರಕ್ರಿಯೆ ಆರಂಭವಾಗಿದೆ. ಆ ಪೈಕಿ ಜಿಲ್ಲೆಯಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ೧೦೫ ಹಾಗೂ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜು.೭ರವರೆಗೆ ೪೬ ಪ್ರಕರಣ ದಾಖಲಾಗಿದ್ದರೆ, ಕಳೆದ ೪ ದಿನಗಳಲ್ಲಿ ಕೋಲಾರದಲ್ಲೇ ಒಟ್ಟು ೫೦೦ ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.ಎಲ್‌ಇಡಿ ಅಪಘಾತಗಳಿಗೆ ಕಾರಣ
ಎಲ್‌ಇಡಿ ಲೈಟ್‌ಗಳ ಪ್ರಖರತೆ ಜಾಸ್ತಿ, ಅವು ದೀರ್ಘ ಬಾಳಿಕೆ ಜತೆಗೆ ಅಲ್ಪ ವಿದ್ಯುತ್ ಶಕ್ತಿಯಿಂದಲೇ ತೀವ್ರ ಪ್ರಖರತೆಯ ಬೆಳಕನ್ನು ನೀಡುತ್ತವೆ. ಆದರೆ, ಕಣ್ಣು ಕುಕ್ಕುವ ಬೆಳಕಿನಿಂದಾಗಿ ಎದುರುಗಡೆ ವಾಹನ ಚಾಲಕರಿಗೆ ಸವಾರರಿಗೆ ರಸ್ತೆಯೇ ಕಾಣದಂತಹ ಸ್ಥಿತಿ ಉಂಟಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸಲು ಕಾರಣವಾಗುತ್ತದೆ.೩೧ಕ್ಕೆ ವರದಿ ನೀಡಲು ಸೂಚನೆ:ವಾಹನ ತಪಾಸಣೆ ನಡೆಸಿ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿರುವ ವಾಹನ ಮಾಲೀಕರ ವಿರುದ್ಧ ಐಎಂವಿ ಕಾಯಿದೆಯ ಕಲಂ ೧೭೭ಡಿ ಪ್ರಕರಣ ದಾಖಲಿಸಿ ಜು.೩೧ರೊಳಗೆ ವರದಿ ನೀಡಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.